ದೇವಳ ಗಡಿಯೊಳಗೆ ಸ್ವಾಮೀಜಿ ಸಮಾಧಿ ಕೊಲ್ಲೂರು ಮೂಕಾಂಬಿಕೆಗೆ ಪೂಜೆ ಸ್ಥಗಿತ
ಕೊಲ್ಲೂರು: ನಿಧನರಾದ ಸ್ವಾಮೀಜಿಯೊಬ್ಬರ ಸಮಾಧಿ ನಿರ್ಮಾಣದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಇಲ್ಲಿನ ಕೊಲ್ಲೂರು ಮುಕಾಂಬಿಕಾ ದೇವಾಲಯದಲ್ಲಿ ಪೂಜೆ ಸ್ಥಗಿತಗೊಂಡು ಗೊಂದಲ ಸೃಷ್ಟಿಯಾಗಿದೆ. ಇಲ್ಲಿನ ಕೊಲ್ಲೂರು ದೇವಾಲಯದ ಅನತಿ ದೂರದಲ್ಲಿರುವ ನಿತ್ಯಾನಂದ ಆಶ್ರಮದ ಶ್ರೀ ವಿಮಲಾನಂದ (ಅವಧೂತ ಶ್ರೀ ನಿತ್ಯಾನಂದ ಸ್ವಾಮೀಜಿ ಅವರ ಕೊನೆಯ ನೇರ ಶಿಷ್ಯ) ಸೋಮವಾರ ಮಧ್ಯಾಹ್ನ ನಿಧನರಾದರು. ಆಶ್ರಮದ ಸಂಪ್ರದಾಯದಂತೆ, ಸನ್ಯಾಸಿಯಾಗಿದ್ದ ಶ್ರೀವಿಮಲಾನಂದರ ದೇಹವನ್ನು ಆಶ್ರಮದ ಬಳಿ ಸಮಾಧಿ ಮಾಡಲು ನಿರ್ಧರಿಸಲಾಯಿತು. ಆದರೆ ಇದಕ್ಕೆ ಕೊಲ್ಲೂರು ದೇವಾಲಯದಿಂದ ವಿರೋಧ ವ್ಯಕ್ತವಾಯಿತು. ಆಶ್ರಮ ದೇವಾಲಯದ ಗಡಿಯೊಳಗಿದೆ, ಆದ್ದರಿಂದ ಗಡಿಯೊಳಗೆ ಸಮಾಧಿ ಮಾಡುವುದರಿಂದ ದೇವಾಲಯ ಸೂತಕದಿಂದ ಮೈಲಿಗೆಯಾಗುತ್ತದೆ, ಆದ್ದರಿಂದ ಗಡಿಯ ಹೊರಗೆ ಸಮಾಧಿ ಮಾಡಬೇಕು ಎಂಬುದು ದೇವಾಲಯದ ವ್ಯವಸ್ಥಾಪನ ಮಂಡಳಿ ವಾದ. ಆದರೆ ಆಶ್ರಮಯದ ಸಂಪ್ರದಾಯ ಪಾಲಿಸಬೇಕು ಎನ್ನುವುದು ಆಶ್ರಮದ ಟ್ರಸ್ಟಿನ ವಾದ. ಸೋಮವಾರ ಈ ವಾದ ಬಗೆಹರಿಯದೆ, ಸೂತಕದಲ್ಲಿ ಪೂಜೆ ಮಾಡುವುದಕ್ಕಾಗುವುದಿಲ್ಲ ಎಂಬ ಕಾರಣಕ್ಕೆ ತಾಯಿ ಮೂಕಾಂಬಿಕೆಗೆ ರಾತ್ರಿ ಪೂಜೆ ರದ್ದುಗೊಳಿಸಲಾಯಿತು, ಮಂಗಳವಾರ ಮುಂಜಾನೆಯ ಪೂಜೆ ಮಾಡಲಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

