ಉಡುಪಿ

ಕಾಲೇಜಿನಲ್ಲಿ ಪೊಲೀಸ್ ದೂರು ಪೆಟ್ಟಿಗೆ ಯೋಜನೆ ಚಾಲನೆ

Published On :

ಉಡುಪಿ:  ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಕಾಪು ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ಅಳವಡಿಸಲಾದ ದೂರು ಮತ್ತು ಸಲಹಾ ಪೆಟ್ಟಿಗೆಯನ್ನು ಕಾರ್ಕಳ ಎಎಸ್ಪಿ ಕೆ. ಅಣ್ಣಾಮಲೈ ಉದ್ಘಾಟಿಸಿದರು.
ಅವರು ಮಾತನಾಡಿ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಆದೇಶದಂತೆ, ಯಾವ ಕಾಲೇಜಿನಲ್ಲಿ ಒಂದೂವರೆ ಸಾವಿರಕ್ಕಿಂತ ಹೆಚ್ಚು ಹೆಣ್ಣು ಮಕ್ಕಳು ಹಾಗೂ ಅಂತರ್ ರಾಜ್ಯದ ಮಕ್ಕಳಿದ್ದಾರೆಯೋ ಆ ಕಾಲೇಜುಗಳಲ್ಲಿ ಸಲಹಾ ಹಾಗೂ ದೂರು ಪೆಟ್ಟಿಗೆ ಅಳವಡಿಸಲು ಇಲಾಖೆ ಯೋಜನೆ ಹಾಕಿದೆ. ವಿದ್ಯಾರ್ಥಿಗಳಿಗೆ ಸಣ್ಣ ಸಣ್ಣ ವಿಷಯಗಳಿಗಾಗಿ ಪೊಲೀಸ್ ಠಾಣೆಗೆ ಬರಲು ಆಗುತ್ತಿಲ್ಲ. ಅವರಿಗೆ ಆದ ಸಮಸ್ಯೆಗಳನ್ನು ಕಾಗದದಲ್ಲಿ ಬರೆದು ಹಾಕಿದಲ್ಲಿ ತುರ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಮುಂದಿನ ವಾರ ನಿಟ್ಟೆ ಎಂಜಿನಿಯರಿಂಗ್ ಕಾಲೇಜು ಮತ್ತು ಕಾರ್ಕಳದ ಭುವನೇಂದ್ರ ಎಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ಇದೇ ರೀತಿಯ ಸಲಹಾ ಮತ್ತು ದೂರು ಪೆಟ್ಟಿಗೆ ಅಳವಡಿಸಲಿದ್ದೇವೆ.
ಸರಿಯಾದ ದೂರು ದಾಖಲಿಸಿ: ಭಾರತದಲ್ಲಿ ಯಾವುದೇ ಯೋಜನೆ ಬಂದರೂ ಅದರ ದುರುಪಯೋಗ ಆಗುವುದೆಂಬ ಹೆದರಿಕೆ ಇದ್ದೇ ಇದೆ. ಆದರೂ, ಹತ್ತು ಜನರು ದುರುಪ್ರಯೋಗ ಮಾಡಿ, ಓರ್ವ ವಿದ್ಯಾರ್ಥಿ ಸರಿಯಾದ ದೂರನ್ನು ದಾಖಲಿಸಿದರೆ ನಮ್ಮ ಕೆಲಸ ಸಾರ್ಥಕವೆನಿಸುತ್ತದೆ ಎಂದರು.
ಸಮೂಹ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಕೆ.ಪಿ. ಆಚಾರ್ಯ, ಪ್ರಾಂಶುಪಾಲ ವಿ.ಕೆ. ಉದ್ಯಾವರ, ಪೊಲೀಸ್ ವೃತ್ತ ನಿರೀಕ್ಷಕ ಸುನೀಲ್ ನಾಯಕ್, ಕಾಪು ಠಾಣಾಧಿಕಾರಿ ರಾಜೇಂದ್ರ ನಾಯಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.