ಉಡುಪಿ

ಉಡುಪಿ-ತೀರ್ಥಹಳ್ಳಿ ರಾ. ಹೆದ್ದಾರಿ ನಿರ್ಮಾಣ ಮಾಡಿದರೆ ಹೋರಾಟ

Published On :

ಉಡುಪಿ: ಉಡುಪಿ- ಹೆಬ್ರಿ- ಆಗುಂಬೆ- ತೀರ್ಥಹಳ್ಳಿಗೆ ಉಡುಪಿ ಎನ್.ಎಚ್. 66ರಿಂದ ತೀರ್ಥಹಳ್ಳಿ 169ಎ ತನಕ ರಾ.ಹೆದ್ದಾರಿ ಮಾಡಲು ನಿರ್ಧರಿಸಿದ ಕೇಂದ್ರ ಕಾಂಗ್ರೆಸ್ ಸರ್ಕಾರದ ಆದೇಶ ಹಿಂತೆಗೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಆಗ್ರಹಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಹೆದ್ದಾರಿಯ ವಿರೋಧಿ ಅಲ್ಲ. ಆದರೆ ಕೇಂದ್ರ ಸರ್ಕಾರ ಉಡುಪಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಮಾಡುವುದರಿಂದ ಅನೇಕ ಜನರು ಮನೆ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಮಂಜೂರಾದ ರಾಷ್ಟ್ರೀಯ ಹೆದ್ದಾರಿಯು ಉಡುಪಿ- ಆದಿಉಡುಪಿ ಹೆದ್ದಾರಿಯಿಂದ ಕಡಿಯಾಳಿ- ಮಣಿಪಾಲ- ಪರ್ಕಳ ಮಾರ್ಗವಾಗಿ ಉಡುಪಿ ನಗರದ ಹೃದಯ ಭಾಗದಿಂದ ಹಾದು ಹೋಗಲಿದೆ. ಪರಿಣಾಮ ರಸ್ತೆಯ ಮಧ್ಯಭಾಗದಿಂದ ಆಚೀಚೆ ತಲಾ 40 ಮೀ. ಅಗಲ, ಒಟ್ಟಿಗೆ 80 ಮೀ. ಜಾಗವನ್ನು ರಾ.ಹೆದ್ದಾರಿಗೆ ಬಳಸಿಕೊಳ್ಳುವುದರಿಂದ ರಸ್ತೆಯ ಇಕ್ಕೆಲಗಳಲ್ಲಿರುವ ಎಲ್ಲ ನೂತನ ಮತ್ತು ಹಳೆಯ ಕಟ್ಟಡಗಳು ನೆಲಸಮಗೊಳ್ಳಲಿವೆ. ಇವನ್ನೆಲ್ಲ ಅರಿಯದೆ ಉಡುಪಿ ನಗರದಲ್ಲಿ ರಾ.ಹೆ. ಮಾಡಲು ಮುಂದಾಗಿರುವುದು ಕೇವಲ ಮೂರ್ಖತನವಾಗಿದೆ ಎಂದರು.
ಆದಿ ಉಡುಪಿ ಮತ್ತು ಬ್ರಹ್ಮಾವರದಲ್ಲಿ ಫ್ಲೈ ಓವರ್ ಮಾಡಲಾಗದ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ರಾಷ್ಟ್ರೀಯ ಹೆದ್ದಾರಿ ಸಚಿವರಾಗಿರುವುದು ಉಡುಪಿ ನಗರಕ್ಕೆ ಶಾಪವಾಗಿದೆ. ಉಡುಪಿ ನಗರದ ರಸ್ತೆ ಇಕ್ಕೆಲಗಳಲ್ಲಿರುವ ಜನರಿಗೆ ಈ ರಾ.ಹೆದ್ದಾರಿ ಮಾರಕದ ಬಗ್ಗೆ ಅರಿವು ಇಲ್ಲವಾಗಿದೆ. ರಾ.ಹೆದ್ದಾರಿಯ ನಗರ ಪ್ರದೇಶದಲ್ಲಿ ತೆಗೆದುಕೊಂಡು ಹೋಗದೆ ಗ್ರಾಮೀಣ ಪ್ರದೇಶದಲ್ಲಿ ಮುಂದುವರಿಸಬೇಕು. ರಾ.ಹೆ. ನಿರ್ಮಾಣದ ಆದೇಶವನ್ನು ವಾಪಸ್ ತೆಗೆದುಕೊಳ್ಳದಿದ್ದರೆ ಆದಿಉಡುಪಿಯಿಂದ ಪರ್ಕಳದವರಗೆ ರಸ್ತೆ ಇಕ್ಕೆಲಗಳಲ್ಲಿ ವಾಸಿಸುವ ಗ್ರಾಮಸ್ಥರೊಡನೆ ಬಿಜೆಪಿ ಉಡುಪಿಯಿಂದ ಪರ್ಕಳದವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ರಘಪತಿ ಭಟ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.