ಉಡುಪಿ

'ಸ್ತ್ರೀ ಸಬಲೀಕರಣಕ್ಕೆ ಮುದ್ದಣ ಕೃತಿ ಪ್ರೇರಣೆ'

Published On :

ಉಡುಪಿ: ಸ್ತ್ರೀ ಸಬಲೀಕರಣದ ಕಾಲಘಟ್ಟದಲ್ಲಿದ್ದರೂ ಇಂದು ಸ್ತ್ರೀಯರ ಮೇಲೆ ಅತ್ಯಾಚಾರ, ಶೋಷಣೆಗಳು ಕಡಿಮೆಯಾಗಿಲ್ಲ. ಈ ನೆಲೆಯಲ್ಲಿ ಮುದ್ದಣ ಬರೆದ ಸ್ತ್ರೀ ಸಬಲೀಕರಣಕ್ಕೆ ಪ್ರೇರಣೆ ನೀಡುವ 'ರಾಮಾಯಣಂ' ಕೃತಿ ಬಹಳ ಪ್ರಸ್ತುತವಾಗಿದೆ ಎಂದು ನಗರದ ಟಿ.ಎಂ.ಎ.ಪೈ. ಶಿಕ್ಷಣ ವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಶುಕ್ರವಾರ ನಡೆದ ಮುದ್ದಣ ಸಾಹಿತ್ಯೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಗಂಡಿನ ಪ್ರಾಬಲ್ಯವನ್ನು ಮೆಟ್ಟಿ ನಿಲ್ಲಲ್ಲು ಹೆಣ್ಣಿಗೆ ಹೇಗೆ ಸಾಧ್ಯವಿದೆ ಎಂದು ಮುದ್ದಣ ತಮ್ಮ ರಾಮಾಯಣಂ ಕೃತಿಯಲ್ಲಿ ಬಹಳ ಅದ್ಭುತವಾಗಿ ವಿವರಿಸಿದ್ದಾರೆ. ಇದು ಈ ಕಾಲಕ್ಕೆ ಪ್ರಸ್ತುತವಾಗಿದೆ, ವಿದ್ಯಾರ್ಥಿನಿಯರು ಅದನ್ನು ಅಧ್ಯಯನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದವರು ಆಶಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ವಿ.ಎಂ. ಇನಾಂದರ್ ವಿಮರ್ಶಾ ಪ್ರಶಸ್ತಿ ಸ್ವೀಕರಿಸಿದ ಬೆಂಗಳೂರಿನ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಪಂಪ, ಕುಮಾರವ್ಯಾಸ, ಮುದ್ದಣ, ವಚನಕಾರರ ಇಂತಹ ಅನೇಕ ಕವಿಗಳ ಬಗ್ಗೆ ಕೇವಲ ಅಭಿಮಾನ ಇದ್ದರೆ ಸಾಲದು. ಬದಲಾಗಿ ಅವರ ಕೃತಿಗಳ ಬಗ್ಗೆ ಅಧ್ಯಯನ ಮಾಡಿದರೆ ಅವರ ಮೇಲಿನ ಅಭಿಮಾನಕ್ಕೆ ನಿಜವಾದ ಬೆಲೆ ಸಿಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎನ್. ಹಾಲಾ ನಾಯ್ಕ್ ವಹಿಸಿದ್ದರು. ಕಾಲೇಜಿನ ಪಪೂ ವಿಭಾಗದ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಚಿನ್ನಸ್ವಾಮಿ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾತ್ಯಾಯಿನಿ ನಿರೂಪಿಸಿದರು. ಪ್ರಿಯಾಂಕ ಶೆಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.