ಉಡುಪಿ

ಶಿರ್ವ: ಕಾರ್ಪ್ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

Published On :

ಉಡುಪಿ:  ದಾನಿ ಹಾಜಿ ಅಬ್ದುಲ್ ಸಾಹೇಬ್ ಅವರಿಂದ 109 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟು ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾಗಿರುವ ಕಾರ್ಪೋರೇಶನ್ ಬ್ಯಾಂಕ್‌ನ ಸಂಸ್ಥಾಪನಾ ದಿನವನ್ನು ಶಿರ್ವ ಶಾಖೆಯಲ್ಲಿ ಬುಧವಾರ ಆಚರಿಸಲಾಯಿತು.
ಶಿರ್ವ ಗ್ರಾ.ಪಂ. ಅಧ್ಯಕ್ಷ ಹಸನಬ್ಬ ಶೇಖ್ ಅವರು ಹಾಜಿ ಅಬ್ದುಲ್ಲಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು.
ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ. ಪುಂಡಲೀಕ ಮರಾಠೆ ಮಾತನಾಡಿ, ಬ್ಯಾಂಕ್‌ನ ಹೆಸರು ಶಿರ್ವದಲ್ಲಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಶಿರ್ವ ಸರ್ಕಾರಿ ಆಸ್ಪತ್ರೆ ಅಥವಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಪ್ರಯೋಜನವಾಗುವ ಒಂದು ಶಾಶ್ವತ ಯೋಜನೆಯನ್ನು ನೀಡುವಂತೆ ಸಲಹೆ ಮಾಡಿದರು.
ಗ್ರಾಹಕರ ಪರವಾಗಿ ಕಟ್ಟಡದ ಮಾಲೀಕ ಸಚ್ಚಿದಾನಂದ ಆಚಾರ್, ನಿವೃತ್ತ ಪ್ರಾಂಶುಪಾಲ ಎಸ್.ವಿ. ಗಣಪತಿ ಭಟ್, ಉದ್ಯಮಿ ಉಮ್ಮರ್ ಇಸ್ಮಾಯಿಲ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಸುಂದರ ಪ್ರಭು, ಉದ್ಯಮಿ ಶೋಧನ ಕುಮಾರ್ ಶೆಟ್ಟಿ ಬೆಳ್ಮಣ್, ಶಿರ್ವ ರೋಟರಿ ಅಧ್ಯಕ್ಷ ಲಿಯೊ ನೊರೊನ್ಹಾ ಇದ್ದರು.
ಹಿರಿಯ ಶಾಖಾ ಪ್ರಬಂಧಕ ಪ್ರೇಮಾನಂದ ಭಟ್ ಸ್ವಾಗತಿಸಿದರು. ಕೆ. ಶಿಲ್ಪಾ ಪ್ರಾಸ್ತಾವಿಕ ಮಾತನಾಡಿದರು. ಶಿಲ್ಪಾ ಶೇಟ್ ಬ್ಯಾಂಕಿನ ನೂತನ ಯೋಜನೆಗಳನ್ನು ಪರಿಚಯಿಸಿದರು. ಶಾಖಾ ಸಹಾಯಕ ಪ್ರಬಂಧಕ ಕೃಷ್ಣಾನಂದ ಕಾಮತ್ ಪುಷ್ಪ ನೀಡಿ ಸ್ವಾಗತಿಸಿದರು. ಬಿ. ರಮೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.