ಕೇಂದ್ರದ ಅನುದಾನಕ್ಕಿಂತ ಒಂದು ಪೈಸೆ ಹೆಚ್ಚು ಅನುದಾನ ನೀಡಿದ್ದರೆ ನಳಿನ್ ಸಾಬೀತು ಪಡಿಸಲಿ: ರೈ
ಬಂಟ್ವಾಳ: ಬಿಜೆಪಿಗರಿಗೆ ತಮ್ಮ ಅಭ್ಯರ್ಥಿಯ ಪರವಾಗಿ ವಾದಿಸುವ ನೈತಿಕತೆ ಇಲ್ಲವಾಗಿದ್ದು, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ನೀಡಿದ ಲೋಕಸಭೆಯ ಅನುದಾನವನ್ನು ಹೊರತುಪಡಿಸಿ ಒಂದು ಪೈಸೆ ಹೆಚ್ಚಿಗೆ ಅನುದಾನ ನೀಡಿದ್ದರೆ ಸಾಬೀತು ಪಡಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸವಾಲೆಸೆದಿದ್ದಾರೆ.
ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಶನಿವಾರ ಬೆಳಗ್ಗೆ ಬಿ.ಸಿ. ರೋಡ್ನಿಂದ ಆರಂಭಗೊಂಡ ಸಾಮರಸ್ಯಕ್ಕಾಗಿ ಕಾಂಗ್ರೆಸ್ ನಡಿಗೆ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಸಚಿವ ಯು.ಟಿ. ಖಾದರ್ ಮಾತನಾಡಿ, ಜಿಲ್ಲೆಯ ಸಮಸ್ಯೆಯನ್ನು ದೇಶದ ಸಂಸತ್ನಲ್ಲಿ ಧ್ವನಿಸುವ ಶಕ್ತಿ ಇರುವುದು ಜನಾರ್ದನ ಪೂಜಾರಿಯವರಲ್ಲಿ ಮಾತ್ರ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಸಮಾಜ ಘಾತುಕ ಶಕ್ತಿಗಳಿಗೆ ರಾಜ್ಯ ಸರ್ಕಾರ ಸೂಕ್ತ ಸಮಯದಲ್ಲಿ ದಿಟ್ಟ ಉತ್ತರ ನೀಡಲಿದ್ದು, ಸಾಮರಸ್ಯದ ಪ್ರತೀಕವಾದ ಕಾಂಗ್ರೆಸ್ನ ಕಾರ್ಯಕರ್ತರು ಶಾಂತಿಸೌಹಾರ್ದತೆ ಸಾರಲು ಶ್ರಮಿಸಬೇಕು ಎಂದರು.
ಅಭ್ಯರ್ಥಿ ಜನಾರ್ದನ ಪೂಜಾರಿ ಮಾತನಾಡಿ, ಭಾರತ ಸೂಪರ್ ಪವರ್ ಆಗಬೇಕೆಂದಿದ್ದರೆ, ಎಲ್ಲೆಡೆಯೂ ಶಾಂತಿ ನೆಲೆಸಬೇಕು. ಸಾಮರಸ್ಯಕ್ಕಾಗಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ಸಿಗರದು ಪುಣ್ಯದ ಕೆಲಸ ಎಂದರು.
ಪಕ್ಷದ ಪ್ರಮುಖರಾದ ಐವನ್ ಡಿಸೋಜ, ಕಣಚೂರು ಮೋನು, ಮಹಮ್ಮದ್ ಬದ್ರುದ್ದೀನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಮಮತಾ ಗಟ್ಟಿ, ಬಿ.ಎಚ್. ಖಾದರ್, ಎ.ಸಿ. ಭಂಡಾರಿ, ಕೃಪಾ ಅಮರ್ ಆಳ್ವ, ವಸಂತಿಚಂದಪ್ಪ, ಮೋಹನ್ ಕೆ.ವಿ., ಯಾಸ್ಮಿನ್, ಪಿಯೂಸ್ ರೋಡ್ರಿಗಸ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ, ಸುದರ್ಶನ್ ಜೈನ್, ಭೂಮಿಕಾ ರವಿಚಂದ್ರನ್ ಇದ್ದರು.
ಪಾದಯಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

