ದೋಷಮುಕ್ತ ಮಾಯಾವತಿ
ಬಹುಜನ ಸಮಾಜ ಪಕ್ಷದ ನಾಯಕಿ, ಉತ್ತರ ್ರದೇಶದ ಮಾಜಿ ಮುಖ್ಯಮಂತ್ರಿ, ಹಾಲಿ ರಾಜ್ಯಸಭೆಯ ಸದಸ್ಯೆಯಾಗಿರುವ ಮಾಯಾವತಿ ಅವರ ವಿರುದ್ಧ ಯಾವ ಆರೋಪಗಳೂ ಈಗ ಸುಪ್ರೀಮ್ ಕೋರ್ಟಿನ ಮುಂದೆ ಇಲ್ಲ ಎಂದು ನ್ಯಾಯಾಲಯ ಗುರುವಾರ ಸ್ಪಷ್ಟೀಕರಣ ನೀಡಿರುವುದು ಒಂದು ರೀತಿಯಲ್ಲಿ ವಿಚಿತ್ರವಾಗಿಯೇ ಕಾಣಬಹುದು.
ಕಳೆದ ವರ್ಷದ ಜುಲೈ ಆರರಂದು ಸುಪ್ರೀಮ್ ಕೋರ್ಟ್ ಮಾಯಾವತಿ ಅವರನ್ನು ದೋಷಮುಕ್ತರೆಂದು ಘೋಷಿಸಿದ್ದು ತಾಜ್ ಕಾರಿಡಾರ್ ಪ್ರಕರಣದಲ್ಲಿ ಮಾತ್ರ. ಆದರೂ ಆ ಸಂಬಂಧದಲ್ಲಿ ಅವರ ವಿರುದ್ಧ ಅಕ್ರಮ ಸಂಪತ್ತಿನ ಗಳಿಕೆಯ ಪ್ರಕರಣಗಳ ದೂರುಗಳೂ ಇರುವುದರಿಂದ ಅವರನ್ನು ಪೂರ್ತಿಯಾಗಿ ದೋಷಮುಕ್ತರೆನ್ನುವಂತಿಲ್ಲ ಎನ್ನುವ ಅರ್ಜಿಯನ್ನು ನ್ಯಾಯಾಲಯದಲ್ಲಿ ಹೂಡಲಾಗಿತ್ತು. ಆದರೆ ಸುಪ್ರೀಮ್ ಕೋರ್ಟಿನ ದಾಖಲೆಗಳಂತೆ ಅಂತಹ ಯಾವ ಅರ್ಜಿಯೂ ಈಗ ಸುಪ್ರೀಮ್ ಕೋರ್ಟಿನ ಮುಂದೆ ಇಲ್ಲ. ಸರ್ಕಾರ ಅವರ ವಿರುದ್ಧ ಅಕ್ರಮ ಸಂಪತ್ತಿನ ಗಳಿಕೆಗೆ ಸಂಬಂಧಿಸಿದಂತೆ ಯಾವ ಮೊಕದ್ದಮೆಯನ್ನೂ ದಾಖಲಿಸಿಲ್ಲ ಎಂದು ವಿವರಣೆ ನೀಡಿದೆ.
ತುಂಬಾ ಹಿಂದೆ ಅಂತಹ ಒಂದು ಅರ್ಜಿ ಇದ್ದಿದ್ದು ನಿಜ. ಆದರೆ ಅದು ಈಗ ನಿಕಾಲೆಯಾಗಿದೆ. ಮಾಯಾವತಿ ಈಗ ಸಂಪೂರ್ಣವಾಗಿ ದೋಷ ಮುಕ್ತರು.
ಈ ತೀರ್ಪಿನಿಂದ ಮಾಯಾವತಿ ಈಗ ನಿರಾಳವಾಗಿ ಉಸಿರಾಡುವಂತೆ ಆಗಿದೆ. ಇದುವರೆಗೂ ಸಂಸತ್ತಿನಲ್ಲಿ ಮೌನವಾಗಿದ್ದ ಅವರು ಇನ್ನು ಮುಂದೆ ಹಲವಾರು ವಿವಾದಗಳಲ್ಲಿ ಆಸಕ್ತಿಯಿಂದ ಪಾಲುಗೊಳ್ಳಲಿದ್ದಾರೆಂದು ವರದಿ. ಬಹುತೇಕವಾಗಿ ಮಾಯಾವತಿ ಈಗ ಸಂಸತ್ತಿನಲ್ಲಿ ಆಳುವ ಕೂಟದ ಪರವಾಗಿಯೇ ಮತ ಚಲಾಯಿಸುವ ಪ್ರವೃತ್ತಿ ಮುಂದುವರಿಯುವ ಸಂಭವವೇ ಹೆಚ್ಚು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

