ನಿಜಹೇಳಿ ಸಾರ್, ಪ್ರೀತ್ಸೋದ್ ತಪ್ಪಾ?
ಮೊಳಕಾಲ್ಮೂರು ಸುರೇಶ್, ಬಳ್ಳಾರಿ
ನನ್ನ ಜೀವನವೆಲ್ಲ ಕಾಡು ಬೆಳದಿಂಗಳಾಯ್ತು ಎಂದು ಸುಂದರಿ ಹಲುಬುವುದರ ರಹಸ್ಯ?
ಕರೆಂಟ್ ಬಿಲ್ ಕಟ್ಟೋಕೆ ದುಡ್ಡಿಲ್ಲ ಅಂತಷ್ಟೆ.
ಹೇಮಂತಕುಮಾರ್, ಬೆಂಗಳೂರು 9035992900
ಗಾಡಿಗೆ ಗಾಡಿ ಟಚ್ ಆದ್ರೆ ಆ್ಯಕ್ಸಿಡೆಂಟ್, ಬಾಡಿಗೆ ಬಾಡಿ ಟಚ್ ಆದ್ರೆ...?
ದೊಡ್ಡವರು ಹುಟ್ಟನ್ನೂ ಆಕಸ್ಮಿಕ ಎಂದೇ ಹೇಳಿದ್ದಾರೆ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ನಿಜಹೇಳಿ ಸಾರ್, ಪ್ರೀತ್ಸೋದ್ ತಪ್ಪಾ?
ಇದು ಒಂದೇ ವಾಕ್ಯದಲ್ಲಿ ಉತ್ತರಿಸಬಹುದಾದ ಪ್ರಶ್ನೆ ಅಲ್ಲ. ಯಾರು, ಯಾರನ್ನು ಎಂದೆಲ್ಲ ಸಂದರ್ಭದೊಂದಿಗೆ ವಿವರಿಸಬೇಕಾಗುತ್ತದೆ.
ಶಿಲ್ಪಿ ರಮೇಶ್, ಸಂತೇಮಾಳ, ಬನ್ನೂರು
ಇಲ್ಲೊಬ್ಬ ಬೋಳು ತಲೆಯಲ್ಲಿ ಹುಡುಗಿ ನೋಡಲು ಹೋಗಿದ್ದಾನೆ...
ನೀನು ಬಂದು ಬೋಳಿಸೋಕೆ ಏನೂ ಉಳಿದಿಲ್ಲ ಎಂದು ಮೊದಲೇ ಸೂಚಿಸುವ ಪರಿಯಿರಬಹುದು!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನೀವು ಎಡಪಂಥೀಯರೋ, ಬಲಪಂಥೀಯರೋ?
ಊಟಕ್ಕೆ ಕುಳಿತಾಗ ಬಲಪಂಥೀಯ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಎಡಪಂಥೀಯ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

