ಹೊಸ ಬಿಲ್ಡಿಂಗಿನ 50 ನೇ ಮಹಡಿಯಲ್ಲಿ ಕಟ್ಟಿಗೆಯ ಕೆಲಸ ನಡೆದಿತ್ತು. ಅಲ್ಲಿಗೆ ಏದುಸಿರು ಬಿಡುತ್ತಾ ಬಂದ ವ್ಯಕ್ತಿ ಜೋರಾಗಿ ಕೂಗಿದ, 'ತಿಮ್ಮ, ನಿನ್ನ ಮಗ ಆಕ್ಸಿಡೆಂಟ್‌ನಲ್ಲಿ ಸತ್ತುಹೋದ'
ಇದನ್ನು ಕೇಳುತ್ತಿದ್ದಂತೆಯೇ ತಿಮ್ಮ 50 ನೇ ಅಂತಸ್ತಿನಿಂದ ಕೆಳಕ್ಕೆ ಜಿಗಿದುಬಿಟ್ಟ.
35ನೇ ಅಂತಸ್ತಿಗೆ ಬರುತ್ತಿದ್ದಂತೆಯೇ ಅವನಿಗೆ ನೆನಪಾಯಿತು: 'ಅರೆ, ನನಗೆ ಮಗನೇ ಇಲ್ಲ'
20ನೇ ಅಂತಸ್ತಿಗೆ ಬಂದಾಗ: 'ಅರೆ, ನನಗಿನ್ನೂ ಮದುವೇನೇ ಆಗಿಲ್ವೇ?'
3ನೇ ಅಂತಸ್ತಿಗೆ ಬರುವ ಹೊತ್ತಿಗೆ ಅವನಿಗೆ ಸ್ಪಷ್ಟವಾಗಿ ಅರಿವಾಯಿತು: 'ಥೋತ್ತೆರಿಕಿ. ನಾನು ತಿಮ್ಮ ಅಲ್ಲ ಕೋಲ್ಯ!'