ಸಂತೇಬೆನ್ನೂರು ಫೈಜ್ನಟ್ರಾಜ್
ಜೀವನದಲ್ಲಿ ಏನಾದರೂ ಸಾಧಿಸಬೇಕಾದ್ದು ಅನಿವಾರ್ಯವೇ ಭಟ್ರೇ?
ಹಾಗೇನಿಲ್ಲ ಸುಮ್ಮನೇ ಕೂತಿದ್ದು ಕೂದಲು ಉಗುರು ಬೆಳೆದು ಗಿನ್ನಿಸ್ ದಾಖಲೆ ಸೃಷ್ಟಿಸಿ ಸಾಧನೆ ಮಾಡಬಹುದು.
ವಿ. ಹೇಮಂತಕುಮಾರ, ಬೆಂಗಳೂರು, 9035992900
ನಿನ್ನ ತುಟಿ ಹಪ್ಪಳ. ಕಚ್ಚಿ ತಿನ್ನಲಾ ಅಂತ ಕೇಳ್ತಿದಾಳಲ್ಲ?
ಪರೋಕ್ಷವಾಗಿ ತುಟಿಗೆ ವ್ಯಾಸಲೀನ್ ಹಚ್ಕೊ ಅಂತ ಹೇಳ್ತಿದಾಳೆ!
ರವಿಕುಮಾರ ಜಿ.ಬಿ. 9449669897
ಕೃಷಿ ಬಜೆಟ್ ಮಾಡಿದ ಹಾಗೆ ಮಠ-ಮಂದಿರಗಳಿಗೂ ಪ್ರತ್ಯೇಕ ಬಜೆಟ್ ಮಂಡಿಸಿದರೆ ಹೇಗಿರುತ್ತೆ?
ಅದಕ್ಕೆ ಋಷಿ ಬಜೆಟ್ ಎಂದು ಹೇಸರಿಡಬಹುದು!
ರಮೇಶ ಭಟ್ ಆವರ್ಸೆ, ಕುಂದಾಪುರ, 9164276058
ಸುಖಕ್ಕೂ ದುಃಖಕ್ಕೂ ಇರುವ ವ್ಯತ್ಯಾಸವೇನು?
ಬಸ್ ತಪ್ಪಿಹೋದದ್ದು ದುಃಖ. ಅದೇ ಬಸ್ ಅಪಘಾತವಾಯಿತು ಎಂದು ಸುದ್ದಿ ಬಂದಾಗ ದುಃಖವೇ ಸುಖವಾಗಿ ಬದಲಾಗುತ್ತದೆ. ಇಷ್ಟೇ ವ್ಯತ್ಯಾಸ.
ಶಿಲ್ಪಿ ರಮೇಶ್, ಸಂತೆಮಾಳ ಬನ್ನೂರು
ಬರಗಾಲದಲ್ಲೇ ಮನೆ ಹೆಚ್ಚಾಗುವುದರ ಗುಟ್ಟೇನು?
ಬರಗಾಲದಲ್ಲಿ ಮಗ ಉಣ್ಣೋದು ಕಲಿತ ಅಂತ ಗಾದೆಯೇ ಇದೆಯಲ್ಲ.
ಬಾಣಭಟ್ಟ