ತನ್ನ ಮೇಲಿನ ಜೋಕ್ ಕೇಳಿ ಕೇಳಿ ಕೋಲ್ಯ ಒಂದು ದಿನ ಬಹಳ ಬೇಜಾರು ಮಾಡಿಕೊಂಡುಬಿಟ್ಟ.
ಕೋಲ್ಯ: ಈ 'ಕನ್ನಡಪ್ರಭ'ದವರು ಎಲ್ಲದ್ರಲ್ಲೂ ನನ್ನ ಹೆಸರು ಎಳೆದು ತಂದು ಜೋಕ್ ಮಾಡ್ತಾರೆ. ನನಗಂತೂ ಸಾಕಾಗಿದೆ. ನಾನು ಭಾಗಿಯಾಗಿಲ್ಲದ ಯಾವುದಾದರೊಂದು ವಿಷಯ ಹೇಳು.
ಹೆಂಡತಿ: ನಾನು ಗರ್ಭಿಣಿಯಾಗಿದೀನಿ!
----
ಸರ್ಕಾರಿ ಶಾಲೆಯ ನಾಲ್ಕೈದು ಮಕ್ಕಳು ಯಾರನ್ನೋ ಶಾಲೆಯತ್ತ ಎಳೆದುಕೊಂಡು ಹೊರಟಿದ್ದರು.
ಇದನ್ನು ಒಬ್ಬ ಮುದುಕ ನೋಡಿದ.
ಮುದುಕ: ಮಕ್ಳೇ, ಬಿಟ್ಬಿಡಿ ಅವ್ನನ್ನ. ಅವ್ನಾಗೇ ಸ್ಕೂಲಿಗೆ ಬರ್ತಾನೆ.
ಮಕ್ಕಳು: ಅಜ್ಜ ಇವನು ವಿದ್ಯಾರ್ಥಿ ಅಲ್ಲ. ನಮ್ಮ ಮಾಸ್ತರ್ರು!