ಬೆಮೆಲ್ ದೇವೇಗೌಡ, ಸಂಡೂರು 9481210017
ಸಜ್ಜನರು ಮತ್ತು ಸಮರ್ಥರು ಏಕೆ ರಾಜಕೀಯದಿಂದ
ಗಾವುದ ದೂರದಲ್ಲಿದ್ದಾರೆ?
ಅಯ್ಯೋ ಪಾಪ! ಅವರಿಗೆ ಮತ ಹಾಕೋಕೇ ಪುರಸೊತ್ತಿಲ್ಲ, ಇನ್ನೆಲ್ಲಿ ರಾಜಕೀಯ?
ಬರ್ಕ್‌ಲಿ ರಮೇಶ, 9008741348
ನಿಮಗೆ ಯಾರಾದರೂ ತರ್ಲೆ ಪ್ರಶ್ನೆ ಕೇಳಿದರೆ ಏನ್ಮಾಡ್ತೀರಾ?
ಇನ್ನೇನು ಇಲ್ಲಿ ಎಲ್ರೂ ಕೇಳ್ತಿರೋದು ಲೈಂಗಿಕ ಕಾಯಿಲೆಗೆ ಪರಿಹಾರಾ ಅನ್ಕೊಂಡ್ಯಾ ರಮೇಶು?
ಜೆ. ಪಿ. ನಾಗರಾಜ, ದಾವಣಗೆರೆ 9901193811
ಒಮ್ಮೆ ಗೆದ್ದವರು ಚುನಾವಣೆಗೆ ನಿಲ್ಲದಂತೆ ಕಾನೂನು ತಂದರೆ ಹೇಗೆ?
ಸೋತವರಿಗೆ ಕಾನೂನು ಮಾಡೋ ಅಧಿಕಾರ ಇದ್ದಿದ್ರೆ ಹಂಗೆ ಆಗ್ತಿತ್ತು ನೋಡು..
ಆರೀಫ್ ದಾವಣಗೆರೆ, 9964280609
ಹುಡುಗಿಯರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕಿಂತ ಕದ್ದು-ಕದ್ದು ನೋಡುವುದೇ ಹೆಚ್ಚೇಕೆ?
ಕಣ್ಣಲ್ಲಿ ಕಣ್ಣಿಟ್ಟರೆ ಕಾಣೋದು ಬರೀ ಕಣ್ಣಿನ ಬಿಂಬ ಮಾತ್ರ ಎಂಬ ಕಾಮನ್‌ಸೆನ್ಸ್.
ಉಜ್ಜನಿ ಜಲೇಂದ್ರ 8971857200
ಪರೀಕ್ಷೆಯಲ್ಲಿ ಫೇಲಾದ್ರೆ ಮತ್ತೆ ಕಟ್ಟಿ ಪಾಸಾಗಬಹುದು, ಲವ್ವಲ್ಲಿ ಫೇಲಾದ್ರೆ?
ತಾಳಿ ಕಟ್ಟೋಕೆ ಯಾರಾದ್ರೂ ಒಬ್ಳು ಸಿಕ್ತಾಳೆ, ಫೀಲ್ ಬೇಡಪ್ಪ!
- ಬಾಣಭಟ್ಟ