ಸಂಪಾದಕೀಯ

ನೀವು ಹುಡುಗಿಯರಿಗೆ ಮಾತ್ರ ಹೂಬಾಣ ಬಿಡುತ್ತೀರಾ?

Published On :

ತೋರಗಲ್ಲ ಉಮೇಶ, ರಾಮದುರ್ಗ
ನಮ್ಮ ರಾಜಕಾರಣಿಗಳಿಗೆ ತರಬೇತು ಕೇಂದ್ರ ತೆಗೆದರೆ ಅವರ ನಡವಳಿಕೆ ಸುಧಾರಿಸಬಹುದೇ?
ತರಬೇತುದಾರನ ನಡವಳಿಕೆಯೇ ಬದಲಾಗುವ ಸಂಶಯವಿದೆ!


ಕಾಳಿಹುಂಡಿ ಶಿವಕುಮಾರ್, 9844883581
ಇಲ್ಲೊಬ್ಬನ ಪ್ರೀತಿ ಪತ್ರದಿಂದ ಶುರುವಾಗಿ ಫೋನ್‌ನಿಂದ ಮುಕ್ತಾಯವಾಯಿತಲ್ಲ?
ಪಾಪ, ಅವನಿಗೆ ಫೋನ್‌ನಲ್ಲಿ ಮಾತ್ರವೇ 'ನೇರ ಸಂಪರ್ಕ ಭಾಗ್ಯ' ಇತ್ತು ಅಂತಾಯಿತು!


ಓಂ ಚನ್ನೇಶ್ ಅರಬಿಳಚಿಕ್ಯಾಂಪ್, 9901257131
ರಾಜಕೀಯ ಅಂದ್ರೆ ಏನು ಬಾಣಭಟ್ರೆ?
ಅದನ್ನು ಮಾಡುತ್ತಿರುವವರಿಗೇ ಗೊತ್ತಿಲ್ಲ, ಸುಮ್ಮನಿರಪ್ಪಾ!


ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಸೌಂದರ್ಯವೆಂಬುದು ಕೇವಲ ಹೆಣ್ಣಿನ ಸೊತ್ತೇ?
ಅನುಭವಿಸುವ ಭಾಗ್ಯವಿದ್ದವರು ಸೊತ್ತು ಯಾರದ್ದು ಎಂದು ತಲೆಕೆಡಿಸಿಕೊಂಡು ಕೂರುವುದಿಲ್ಲ.



ಎಂ. ಬಿ. ಕೃಷ್ಣಮೂರ್ತಿ, 9449130531
ನೀವು ಹುಡುಗಿಯರಿಗೆ ಮಾತ್ರ ಹೂಬಾಣ ಬಿಡುತ್ತೀರಾ?
ಛೀ ಕಳ್ಳ, ಆಸೆ ನೋಡು!

 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.