ಸಂಪಾದಕೀಯ

ಸರ್ಕಾರದ ಆದೇಶ, ವಿದ್ಯಾರ್ಥಿಗಳ ಪರದಾಟ

Published On :

ಕಾಲೇಜು ಶಿಕ್ಷಣಕ್ಕೆ ಸಂಬಂಧಿಸಿ ಸರ್ಕಾರದ ಸುತ್ತೋಲೆ ನೋಡಿದ ಎಲ್ಲರಿಗೂ ಆಶ್ಚರ್ಯ ಮತ್ತು ದಿಗ್ಬ್ರಮೆ ಆಗುತ್ತದೆ. ಸ್ವತಃ ಸರ್ಕಾರವೇ ಮುಂದೆ ನಿಂತು ಸರ್ಕಾರಿ ಪದವಿ ಕಾಲೇಜುಗಳನ್ನು ಮುಚ್ಚಲು ಪ್ರಯತ್ನಿಸುತ್ತಿದೆ ಎಂದು ಭಾಸವಾಗುತ್ತಿದೆ.
ರಾಜ್ಯ ಸರ್ಕಾರದ 359 ಪದವಿ ಕಾಲೇಜುಗಳಲ್ಲಿ ಹೆಚ್ಚಾಗಿ ಪ್ರವೇಶ ಪಡೆಯುವವರು ಮತ್ತು ಹಿಂದುಳಿದ ವರ್ಗದವರಾಗಿದ್ದಾರೆ. ಸರ್ಕಾರದ ಈ ಸುತ್ತೋಲೆ ಬಡವರಿಗೆ ಉನ್ನತ ಶಿಕ್ಷಣ ಗಗನ ಕುಸುಮ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.  ಸರ್ಕಾರದ ಸುತ್ತೋಲೆಯಲ್ಲಿ ಐಚ್ಛಿಕ ವಿಷಯಗಳಿಗೆ ಕನಿಷ್ಟ 15 ವಿದ್ಯಾರ್ಥಿಗಳು ಪ್ರವೇಶ ಪಡೆದಿರಬೇಕು. ಇಲ್ಲದಿದ್ದರೆ ಕಡ್ಡಾಯವಾಗಿ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು. ಈ ಆದೇಶವನ್ನು ಉಲ್ಲಂಘಿಸಿದರೆ ಪ್ರಾಂಶುಪಾಲರೇ ನೇರ ಹೊಣೆ.
ಈ ಸುತ್ತೋಲೆಯಲ್ಲಿ ಎಂಥ ಮೂರ್ಖತನ ಅಡಗಿದೆ ನೋಡಿ. ಹಲವಾರು ಬಡ ವಿದ್ಯಾರ್ಥಿಗಳು ಹಣಕಾಸು ತೊಂದರೆಯಿಂದ ಹಾಗೂ ಖಾಸಗಿ ಕಾಲೇಜುಗಳ ಡೊನೇಷನ್ ಹಾವಳಿಗೆ ಬೇಸತ್ತು ಸರ್ಕಾರಿ ಕಾಲೇಜುಗಳಲ್ಲಿ ಬಿಬಿಎ, ಬಿಬಿಎಂ ಮತ್ತು ಬಿಸಿಎ ಅಂತಹ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ಹೋದರೆ, 15 ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಮಾತ್ರ ಈ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಪ್ರಾಂಶುಪಾಲರಿಂದ ಸುತ್ತೋಲೆಯ ಉತ್ತರ ಬರುತ್ತದೆ.
ಹೀಗಾದರೆ ಹೇಗೆ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ಬಯಸುತ್ತಾರೆ? ಖಾಸಗಿ ಕಾಲೇಜುಗಳ ಒತ್ತಡದಿಂದ ಸರ್ಕಾರವೇ ಪರೋಕ್ಷವಾಗಿ ಸರ್ಕಾರಿ ಪದವಿ ಕಾಲೇಜುಗಳನ್ನು ಮುಚ್ಚುವ ಹಂತದಲ್ಲಿದೆ!
-ಮಲ್ಲಿಕಾರ್ಜುನಗೌಡ (ಎಂಬಿಎ)

ಮುಖ್ಯಮಂತ್ರಿಗಳಿಗೆ ತಿಳಿಯದ್ದೇನಲ್ಲ

ದಿನಾಂಕ 11.6.13ರಂದು ಪುಟ 2 ಕನ್ನಡಪ್ರಭದಲ್ಲಿ ಪ್ರಕಟವಾದ ಮತ್ತು 12.6.13 ರಂದು ಪುಟ 3ರಲ್ಲಿ ಪ್ರಕಟವಾದ ಪ್ರತಿಷ್ಠಿತ 5 ಬಡಾವಣೆಗಳಲ್ಲಿ ಪ್ರಮುಖವಾದ ಕೆಂಪೇಗೌಡ ಮತ್ತು ಶಿವರಾಮ ಕಾರಂತರ ಬಡಾವಣೆಗಳಲ್ಲಿ ನಡೆದಿರುವ ಅಕ್ರಮಗಳು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಅಂದಿನ ಆಡಳಿತ ಪಕ್ಷಗಳು ರೈತರ, ರೆವಿನ್ಯೂ ನಿವೇಶನದಾರರ ವಿರೋಧವಾಗಿ ಬಿಡಿಎಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರವನ್ನು ನೀಡಿತ್ತು. ಕೆಂಪೇಗೌಡ ಬಡಾವಣೆ ನಿರ್ಮಾಣವಾದ ವಿಷಯದಲ್ಲಿ ಬಿಡಿಎ ವಿರುದ್ಧ ರೈತರು ತಿರುಗಿ ಬಿದ್ದು ಆದ ರಕ್ತಪಾತ ಮತ್ತು ಗಲಾಟೆಯ ವಿಷಯ ತಿಳಿದು ಸಿದ್ದರಾಮಯ್ಯ
ಮತ್ತು ಇತರ ಪಕ್ಷಗಳು ತಂಡೋಪತಂಡವಾಗಿ ಆಗಮಿಸಿ ಇದಕ್ಕೊಂದು ಪರಿಹಾರ ರೂಪಿಸಿ, ಬಿಡಿಎ ಎಂಬ ಇಲಾಖೆಯನ್ನು ಮುಚ್ಚಿಸುತ್ತೇನೆ ನನಗೆ ಅಧಿಕಾರ ನೀಡಿ ಎಂದೆಲ್ಲಾ ಹೇಳಿದ್ದರು. ಈಗ ಆ ಹೇಳಿಕೆಯನ್ನು ಸತ್ಯವಾಗಿಸುವರೆ? ಬಿಡಿಎ ಎಂಬ ಸಂಸ್ಥೆಯು ಬಲ್ಲಿದರ, ದಗಲ್‌ಬಾಜಿಗಳ ಅಕ್ರಮಗಳ ಗೂಡಾಗಿದೆ. ಈ ಎರಡು ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ರೆವಿನ್ಯೂ ಮನೆಗಳನ್ನು ಮತ್ತು ರೆವಿನ್ಯೂ ನಿವೇಶನಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಉಳಿಸಿಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಬಡವರ ಪರವಾಗಿ, ಬಡವರನ್ನು ವಸತಿ ರಹಿತರನ್ನಾಗಿ ಮಾಡಬಾರದೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.
-ಹರಿದೇವನಹಳ್ಳಿ ಅಶೋಕ್,  ವಿಜಯನಗರ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.