ಕೋಲ್ಯ ಸತ್ತು ಸ್ವರ್ಗ ತಲುಪುತ್ತಾನೆ. ಸ್ವರ್ಗದ ಗೊಡೆಗಳಿಗೆಲ್ಲ ದೊಡ್ಡ ದೊಡ್ಡ ಗಡಿಯಾರಗಳನ್ನು ತೂಗುಹಾಕಲಾಗಿರುತ್ತದೆ.
ಕೋಲ್ಯ: ಎಲೈ ರಂಭೆ, ಇಲ್ಲಿ ಇಷ್ಟೊಂದು ಗಡಿಯಾರಗಳೇಕೆ?
ರಂಭೆ: ಇವು 'ಸುಳ್ಳು ಗಡಿಯಾರಗಳು'. ಪ್ರತಿ ವ್ಯಕ್ತಿಗೂ ಒಂದೊಂದು ಗಡಿಯಾರ ತೂಗು ಹಾಕ್ತೀವಿ. ವ್ಯಕ್ತಿ ಸುಳ್ಳು ಹೇಳಿದಂತೆಲ್ಲ ಗಡಿಯಾರದ ಮುಳ್ಳು ತಿರುಗುತ್ತೆ.
ಕೋಲ್ಯ(ಗಡಿಯಾರವೊಂದನ್ನು ತೋರಿಸುತ್ತಾ): ಅದ್ಯಾರ ಗಡಿಯಾರ?
ರಂಭೆ: ಅದು ಮದರ್ ಥೆರೆಸಾಳ ಗಡಿಯಾರ. ಇದುವರೆಗೂ ಸ್ವಲ್ಪವೂ ತಿರುಗಿಲ್ಲ!
ಕೋಲ್ಯ: ಹಾಗಿದ್ರೆ ಭಾರತದ ರಾಜಕಾರಣಿಗಳ ಗಡಿಯಾರಗಳೆಲ್ಲ ಎಲ್ಲಿವೆ?
ರಂಭೆ: ಓ ಅವಾ? ನಮ್ಮ ಇಂದ್ರನ ಆಫೀಸಿನಲ್ಲಿವೆ. ಅವುಗಳನ್ನು ನಾವು ಟೇಬಲ್ ಫ್ಯಾನ್ ಥರ ಬಳಸ್ತಾ ಇದೀವಿ!