ಅಂಚೆ ನೇಮಕಾತಿ ವಿಳಂಬ
2012ರ ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ 6000 (ಆರು ಸಾವಿರ) ಪೋಸ್ಟಲ್ ಅಸಿಸ್ಟೆಂಟ್ ಹಾಗೂ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿತ್ತು. ಅರ್ಜಿ ಕಾಲಾವಧಿ ಮುಗಿದು ನಾಲ್ಕು ತಿಂಗಳುಗಳಾಗುತ್ತಾ ಬಂದರೂ ಕೂಡಾ ಕೇಂದ್ರ ಅಂಚೆ ಇಲಾಖೆ ನ್ಯೂ ದೆಹಲಿಯವರು ಪರೀಕ್ಷೆಯ ದಿನಾಂಕ ಇನ್ನೂ ನಿಗದಿ ಮಾಡದೇ ಇರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಹಿಂದಿನ ನೇಮಕಾತಿಗಿಂತ ಈ ನೇಮಕಾತಿಯಲ್ಲಿ ಹೊಸ ಬದಲಾವಣೆ ತಂದಿದೆ. ಆದರೆ ಒಂದು ನೇಮಕಾತಿಯು ಆರು ತಿಂಗಳೊಳಗಾಗಿ ಮುಗಿಯಬೇಕು. ಸದ್ಯದ ನೇಮಕಾತಿ ಏಳು ತಿಂಗಳಾದರೂ ಕೂಡಾ ಪರೀಕ್ಷೆದಿನಾಂಕ ಹಾಗೂ ಅರ್ಜಿದಾರರಿಗೆ ಪರೀಕ್ಷಾ ಪ್ರವೇಶ ಪತ್ರ ಇನ್ನೂ ಕಳುಹಿಸಿಲ್ಲ. ಅಂಚೆ ಇಲಾಖೆಯಲ್ಲಿ ವಿಚಾರಿಸಿದಾಗ ಹಾರಿಕೆ ಉತ್ತರನೀಡುತ್ತಿದ್ದಾರೆ. ಇನ್ನಾದರೂ ಅಂಚೆ ಇಲಾಖೆಯ ನೇಮಕಾತಿ ವಿಭಾಗ ಎಚ್ಚೆತ್ತುಕೊಂಡು ನೇಮಕಾತಿ ಪೂರ್ಣಗೊಳಿಸಬೇಕು.
-ಮಹಾಂತೇಶ ಬ್ಯಾಹಟ್ಟಿ, ಲಿಂಗಸುಗೂರು
ಪೊಲೀಸರ ಗೂಂಡಾಗಿರಿ ಖಂಡನೀಯ
ರಾಷ್ಟ್ರ ರಾಜಧಾನಿಯ ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ಅನೇಕ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಪಂಜಾಬ್ನಲ್ಲಿ ಮಹಿಳೆಯ ಮೇಲೆ ಟ್ರಕ್ ಚಾಲಕರು ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಈ ಬಗ್ಗೆ ಆರಕ್ಷಕರಿಗೆ ದೂರು ನೀಡಿದರೂ ಮಹಿಳೆಯನ್ನೇ ಪೊಲೀಸರು ಥಳಿಸಿದ್ದಾರೆ. ಪೊಲೀಸರ ಇಂತಹ ಗೂಂಡಾಗಾರಿಕೆ ಖಂಡನೀಯ. ಇದರಿಂದಾಗಿ ಮಹಿಳಾ ಸ್ವಾತಂತ್ರ್ಯಕ್ಕೆ ಧಕ್ಕೆವುಂಟಾಗಿದೆ. ಪೊಲೀಸರು ದುಷ್ಟರನ್ನು ಶಿಕ್ಷಿಸುವ ಬದಲು ಶಿಷ್ಟರನ್ನು ಶಿಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ? ಈ ಕೃತ್ಯದಲ್ಲಿ ಆರೋಪಿಗಳ ಪರ ವಹಿಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸುವುದರೊಂದಿಗೆ ಅವರನ್ನು ಕೆಲಸದಿಂದ ಅಮಾನತುಗೊಳಿಸಬೇಕು. ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವುದು ಸೂಕ್ತ.
-ಪ್ರಸಾದ್ ಆಚಾರ್ಯ ಕೊಲತ್ತಡ್ಕ, ಪುತ್ತೂರು
ನಿಯಮಕ್ಕೆ ಬೆಲೆ ಇಲ್ಲ
ಈಶಾನ್ಯ ಕರ್ನಾಟಕ ಸಾರಿಗೆ ಇಲಾಖೆಯವರು ಡ್ರೈವರ್ ಮತ್ತು ಕಂಡಕ್ಟರ್ಗಳ ಮೇಲೆ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಜರುಗಿಸಿದರೂ ಅದನ್ನು ಗಮನಿಸದೆ ಮನಬಂದಂತೆ ಮೊಬೈಲ್ ಫೋನ್ಗಳನ್ನು ಉಪಯೋಗಿಸುತ್ತಿರುವುದು ವಿಪರ್ಯಾಸವೇ ಸರಿ. 50 ಪ್ರಯಾಣಿಕರ ಸುರಕ್ಷತೆ ಕಾಪಾಡುವಂಥವರೆ ಇಂತಹ ಕೆಲಸಕ್ಕೆ ಕೈ ಹಾಕುತ್ತಿರುವುದು ನಾಚಿಕೆಯ ವಿಚಾರ. ಇದರಿಂದ ಪ್ರಯಾಣಿಕರು ಸಹ ಭಯದ ವಾತವರಣದಲ್ಲೆ ಪ್ರಯಾಣಿಸುವಂತಾಗಿದೆ. ಈ ಕೂಡಲೆ ಸಾರಿಗೆ ಇಲಾಖೆಯವರು ಪ್ರಯಾಣಿಕರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮೊಬೈಲ್ ಫೋನ್ ಉಪಯೋಗಿಸುತ್ತಿರುವ ಡ್ರೈವರ್ ಮತ್ತು ಕಂಡೆಕ್ಟರ್ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂಂದು ಮನವಿ.
-ಎಂ ಡಿ ವಿಶಾಖ, ಚಿತ್ತಾಪೂರ
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

