ಜಗ್ಗೇಶ್ ಹೊಯ್ದ ನೀರ್ ದೋಸೆಯಲ್ಲಿ ತೂತೇ ಇಲ್ಲವಂತೆ ನಿಜವಾ?
ಯಕ್ಷ ಮೈಸೂರು
ಜಗ್ಗೇಶ್ ಹೊಯ್ದ ನೀರ್ ದೋಸೆಯಲ್ಲಿ ತೂತೇ ಇಲ್ಲವಂತೆ ನಿಜವಾ?
ತೂತಿಲ್ಲದ ದೊಸೆಯಿಲ್ಲ, ವಿವಾದವಿಲ್ಲದ ಸಿನಿಮಾವಿಲ್ಲ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಮನುಜರಿಗೆ ಎರಡು ಕಣ್ಣುಗಳ ಜತೆಗೆ ಮತ್ತೊಂದು ಕಣ್ಣು ಇದ್ದಿದ್ದರೆ?
ಕಣ್ಣು ಹೊಡೆಯುವಾಗ ಯಾವ ಕಣ್ಣು ಮುಚ್ಚಬೇಕು ಎಂಬ ಗೊಂದಲ ಉಂಟಾಗುತ್ತಿತ್ತು.
ಫ್ಯಾಷನ್ ಡಿಸೈನರ್ ಮಧು, 9945737427
ಸಿನಿಮಾ ನಿರ್ದೇಶಕಿಯಾದ ನನ್ನ ಪ್ರೇಯಸಿ ಎಷ್ಟೇ ಚೆನ್ನಾಗಿ ಚುಂಬಿಸಿದರೂ ಕಟ್ ಕಟ್, ಆ್ಯಕ್ಷನ್ ಅಂತಾಳಲ್ಲ?
ಸದ್ಯ ಪ್ಯಾಕಪ್ ಅನ್ನಲಿಲ್ಲವಲ್ಲ!
ಹರಳಹಳ್ಳಿಪುಟ್ಟರಾಜು, ಪಾಂಡವಪುರ, 9632838088
ಪ್ರೀತಿ ಅನ್ನೋ ಕೆರೆ ಬತ್ತೋದೇ ಇಲ್ವಲ್ಲಾ?
ಅದರಲ್ಲಿ ಬಿದ್ದ ಕೆಲವರಾದರೂ ಮುಳುಗಬೇಕಲ್ಲ ಅದಕ್ಕೆ.
ಉಜ್ಜನಿ ಜಲೇಂದ್ರ, ಮಲ್ಲುಂಗೆರೆ, 8971857200
ನಮ್ಮ ಪ್ರಧಾನಿಯವರ ಸುದೀರ್ಘ ಕಾಲದ ಮೌನವ್ರತ ಯಾರ ಶ್ರೇಯಸ್ಸಿಗಾಗಿ?
ಅವರದ್ದೇ ಶ್ರೇಯಸ್ಸಿಗಾಗಿ.
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

