ಸಂಪಾದಕೀಯ

ದೇವರಿಲ್ಲವೆಂದು ಹೇಳುವ ವಿಜ್ಞಾನಿಗಳು...

Published On :

ದೇವರಿಲ್ಲವೆಂದು ಹೇಳುವ ವಿಜ್ಞಾನಿಗಳು, ಉಡಾವಣೆ ಮುನ್ನ ಗಂಧದ ಕಡ್ಡಿ ಹಚ್ಚುವುದೇಕೆ?
ಒಂದು ವೇಳೆ ಇದ್ದರೆ ನಿನ್ನ ಪ್ರಭಾವ ತೋರಿಸು ಅಂತ!
ಲಕ್ಷ್ಮೀ ಬರ್ಕಲಿ ರಮೇಶ ಕಿರಗಂದೂರು, ಮಂಡ್ಯ


ಆರ್. ಮಧುಸೂದನ್, 9945737427
'ಪ್ರೀತಿಸುವ ಕಲೆ' ಎಂಬ ಪುಸ್ತಕ ಬರೆದಿದ್ದೇನೆ. ಪ್ರಣತಿಯಿಂದ ಪ್ರೇಮದ ಮುನ್ನುಡಿ ಬರೆಸಿಕೊಡ್ತೀರಾ?
ಪ್ರೀತಿಸುವ ವಿಷಯದಲ್ಲಿ ಯಾವ ಕೆಲಸವನ್ನೂ ಬೇರೆಯವರಿಗೆ ಬಿಡಬಾರದು!

ಸಿ. ನಾಗರಾಜ, ಅರದೋಟ್ಲು ಭದ್ರಾವತಿ
ಕಾಗದದ ಹೂವಿನಿಂದ ಸುವಾಸನೆ ಬರುವುದಿಲ್ಲ. ಸುಳ್ಳು ಮಾತನಾಡುವವರಿಂದ?
ಅನುಮಾನದ ವಾಸನೆ ಬರುತ್ತದೆ!

ರಮೇಶ್ ಭಟ್ ಆವರ್ಸೆ, ಕುಂದಾಪುರ, 9164276058
ಹುಡುಗಿಯರಿಗೆ 'ಪ್ರಪೋಸ್‌' ಮಾಡುವುದು ಹೇಗ ಬಾಣಭಟ್ರೆ?
ಮೊದಲು ನಿಮ್ಮ 'ಪೋಸ್‌' ಅನ್ನು ಬದಲಾಯಿಸಿಕೊಳ್ಳಬೇಕು!

ವಿ. ಹೇಮಂತ ಕುಮಾರ್, ಬೆಂಗಳೂರು, 9035992900
ಮೊಗ್ಗಾಗಿರುವ ಅವಳ ಮನಸ್ಸನ್ನು ಹೂವಾಗಿ ಅರಳಿಸುವುದು ಹೇಗೆ?
ಕೃಷಿ ವಿಜ್ಞಾನಿಯನ್ನು ಸಂಪರ್ಕಿಸಿ!



 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.