ಸಂಪಾದಕೀಯ

ಪ್ರೀತಿ ಎಂದರೆ ತಿಳಿಯದಂತಿದ್ದವಳು ಈಗ ಪ್ರೀತಿಸ್ತಿದ್ದೀನಿ ಎನ್ನುತ್ತಿದ್ದಾಳಲ್ಲ?

Published On :

ಸಂಗಮೇಶ್ ಯಡ್ರಾಮಿ, 7259434853
ಪ್ರೀತಿ ಎಂದರೆ ತಿಳಿಯದಂತಿದ್ದವಳು ಈಗ ಪ್ರೀತಿಸ್ತಿದ್ದೀನಿ ಎನ್ನುತ್ತಿದ್ದಾಳಲ್ಲ?
ಕ್ಲಾಸ್ ತೆಗೆದುಕೊಂಡ ಶ್ರೇಯಸ್ಸು ನಿಮಗೇ ಸಲ್ಲಬೇಕು ಅಂತಿದೀರಾ?

ಚಿರಪ್ರಭ, ನಂಜನಗೂಡು, 8553793107
ದೆಹಲಿಯಿಂದ ಹಗರಣಗಳು ಧಾರಾವಾಹಿಯಂತೆ
ಬರುತ್ತಿವೆಯಲ್ಲ?
ಮಹಾಕಾವ್ಯ ನಿರ್ಮಾಣ ಅವರ ಉದ್ದೇಶವಿದ್ದಂತಿದೆ,
ಸ್ವಲ್ಪ ತಾಳಿಕೊಳ್ಳಿ.

ಫ್ಯಾಷನ್ ಡಿಸೈನರ್ ಮಧು, 9945737427
ಮಳೆಗಾಲದಲ್ಲಿ ಛತ್ರಿ ಜೊತೆಯಿರಬೇಕು. ಚಳಿಗಾಲದಲ್ಲಿ ಸಂಗಾತಿ ಜೊತೆಗಿರಬೇಕು ಅಂತಾರಲ್ಲ?
ಛತ್ರಿಬುದ್ಧಿ ಜತೆಗಿರಿಸಿಕೊಂಡರಷ್ಟೇ ಅಪಾಯ!

ಓಂ ಚೆನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಹೆಂಡತಿಗೆ ಧರ್ಮಪತ್ನಿ ಎನ್ನುತ್ತಾರೆ. ಗಂಡನಿಗೆ...?
'ಅಯ್ಯೋ, ಇದೇ ನನ್ ಕರ್ಮ!'

ಲಕ್ಷ್ಮೀಬರ್ಕ್‌ಲಿ ರಮೇಶ, 9538786547
ಮನುಷ್ಯನಿಗೆ ವಯಸ್ಸಾದಂತೆ ಒಂಟಿತನ ಕಾಡುವುದು ಏಕೆ?
ಲಾಸ್ಟ್ ಟ್ರಿಪ್‌ಗೆ ಒಬ್ಬನೇ ಹೋಗಬೇಕಲ್ಲ ಎಂಬ ಬೇಜಾರಿನಲ್ಲಿ.

 ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.