ಸಂಪಾದಕೀಯ

ಮೀನಿನ ಹೆಜ್ಜೆಯ ಜಾಡು ಹಿಡಿಯಬಹುದು, ಆದರೆ ಹೆಣ್ಣಿನ ಮನಸ್ಸು ಅರ್ಥ...

Published On :

ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಮೀನಿನ  ಹೆಜ್ಜೆಯ ಜಾಡು ಹಿಡಿಯಬಹುದು, ಆದರೆ ಹೆಣ್ಣಿನ ಮನಸ್ಸು ಅರ್ಥ ಮಾಡಿಕೊಳ್ಳೋದು ಕಷ್ಟವಂತೆ ನಿಜಾನಾ?
ಮೀನು ಹೆಜ್ಜೆ ಇಡೋದು ನಿಜವಾದ್ರೆ
ಈ ಮಾತೂ ನಿಜವೇ.

ವಿ. ಹೇಮಂತಕುಮಾರ, ಬೆಂಗಳೂರು, 9035992900
ನೀ ಪ್ರೀತಿಸಿದ ಆ ದಿನಗಳು ಮರೆಯೋಕಾಗ್ತಿಲ್ಲ,ನೀ ಪ್ರೀತಿ ತೊರೆದು ಹೋದ ಆ ಕ್ಷಣಗಳು ಬದುಕೋಕಾಗ್ತಿಲ್ಲ ಅಂತಿದಾಳಲ್ಲ?
ಬಿಟ್ಟ ಮೇಲೆ ಬುದ್ಧಿ ಬಂತು ಅಂದ್ರೆ ಇದೇ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಪ್ರೇಮಿಗಳಿಗೂ ದಂಪತಿಗಳಿಗೂ ಇರುವ ವ್ಯತ್ಯಾಸವೇನು?
ಒಂದು ಅನಧಿಕೃತ, ಇನ್ನೊಂದು ಅಧಿಕೃತ!

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಒಂದೇ ಮರದ ಹಣ್ಣುಗಳೆಲ್ಲಾ ಒಂದೇ ರುಚಿಯಿರುತ್ತವೆ. ಆದರೆ ಒಂದೇ ಮನೆಯ ಹೆಣ್ಣುಗಳಲ್ಲಿ ಒಂದೇ ಗುಣ ಕಾಣುವುದಿಲ್ಲ ಏಕೆ?
ಒಂದೇ ಕುಟುಂಬದ ಗಂಡುಗಳಲ್ಲೂ ಒಂದೇ ಗುಣ ಕಾಣುವುದಿಲ್ಲವಲ್ಲ ಅದಕ್ಕೆ.

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಹಣೆಬರಹವೆಂಬುದು ಯಾವ ಭಾಷೆಯಲ್ಲಿರುತ್ತೆ?
ಯಾವತ್ತೂ ನಮಗೆ ಓದಲುಬಾರದ ಭಾಷೆಯಲ್ಲಿರುತ್ತದೆ.

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.