ಸಂಪಾದಕೀಯ

ತಂಗಿ ಫ್ರೆಂಡ್ಸ್ ತಂಗಿ ಥರ ಆದ್ರೆ, ಹೆಂಡ್ತಿ ಫೆಂಡ್ಸ್?

Published On :

ರಮೇಶ್ ಭಟ್ ಆವರ್ಸೆ, ಮೈಸೂರು, 9164276058
ತಂಗಿ ಫ್ರೆಂಡ್ಸ್ ತಂಗಿ ಥರ ಆದ್ರೆ, ಹೆಂಡ್ತಿ ಫೆಂಡ್ಸ್?
ಅವರಿಗೆ ಗಂಡನ ಫ್ರೆಂಡ್ಸ್ ಏನಾಗ್ಬೇಕು ಅಂತ ಮೊದಲು ಹೇಳಿ.

ವಿ. ಹೇಮಂತಕುಮಾರ, ಬೆಂಗಳೂರು, 9916707979
ಹುಡುಗಿಯರಿಗೆ ಮದುವೆ ಆಗಿದೆ ಎಂದು ಗೊತ್ತಾಗಲು ತಾಳಿ, ಕಾಲುಂಗುರ ಇರುತ್ತೆ. ಹುಡುಗರಿಗೆ?
ಮುಖ ನೋಡಿದರೆ ಸಾಕು ಗೊತ್ತಾಗುತ್ತೆ!

ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಪ್ರೀತಿ ಮಾಡುವುದು ಸುಲಭ, ಅದನ್ನು ಅರಗಿಸಿಕೊಳ್ಳೋದು ಕಷ್ಟ ಯಾಕೆ?
ಯಾವತ್ತೂ ಹಾಗೆ. ಫೋನಲ್ಲಿ ಮಾತಾಡೋದು ಸುಲಭ, ಬಿಲ್ ಕಟ್ಟೋದು ಕಷ್ಟ!

ಕೆ.ಎಂ. ಲಿಂಗರಾಜು, ನಂಜನಗೂಡು, 9916021364
ಚಹ ಮಾರುತ್ತಿದ್ದ ವ್ಯಕ್ತಿ ಪ್ರಧಾನಿಯಾದರೆ ನಮ್ಮ ಅನಂತಮೂರ್ತಿಯವರಿಗೇಕೆ ಹೊಟ್ಟೆಯುರಿ?
ಅವರು ಕಾಫಿ ಪ್ರಿಯರಂತೆ!

ಫ್ಯಾಷನ್ ಡಿಸೈನರ್ ಮಧು, 9945737427
ಕಾಮನಬಿಲ್ಲಿಗೂ ಮನಸೋಲದ ಹೃದಯ, ಆ ಚೆಲುವೆಯ ಒಂದು ನಗುವಿಗೆ ಕರಗಿ ನೀರಾಯ್ತಲ್ಲ?
'ನಗುವಿನಿಂದ ಮಗುವಿನವರೆಗೆ' ಎಂಬ ಪುಸ್ತಕ ಬರೆಯಬಹುದು!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.