ಲೈಂಗಿಕ ಅಲ್ಪಸಂಖ್ಯಾತರು ಮುಖ್ಯವಾಹಿನಿ ಸೇರಲು ಮುನ್ನುಡಿ
ಕರ್ನಾಟಕ ಸರ್ಕಾರ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಆರಂಭಿಸಿರುವ ಮೈತ್ರಿ ಯೋಜನೆ ಸ್ವಾಗತಾರ್ಹವಾದದ್ದು. ವಾಹನ ದಟ್ಟಣೆಯ ಪ್ರತಿ ಸಿಗ್ನಲ್ಲುಗಳಲ್ಲಿ, ರಸ್ತೆ ಬದಿಯ ಬೀದಿ ದೀಪದ ಬೆಳಕಿನ ಕೆಳಗೆ ಗಿರಾಕಿಯ ಅರಸುತ್ತ, ಅಂಗಡಿಗಳ ಮುಂದೆ ಭಿಕ್ಷೆ ಬೇಡುತ್ತಾ ತಮ್ಮ ಹಸಿವಿನ ದಾಹ ತಣಿಸಲು ಹೆಣಗುವ ಜೀವಗಳು ಸಾವಿರಾರು. ಗಡಸು ಧ್ವನಿಯ, ಬಲಿಷ್ಟ ದೇಹದ, ವಿಚಿತ್ರ ಹಾವ-ಭಾವದ, ಸ್ತ್ರೀಯಂತೆ ಸೀರೆಯುಟ್ಟ ಅವನಲ್ಲದ ಅವಳು ಎಲ್ಲರ ದೃಷ್ಟಿಯಲ್ಲಿ ವಿಚಿತ್ರ ಕೌತುಕದ ವಸ್ತು. ಅವರ ವೈಯಕ್ತಿಕ ಮತ್ತು ಕೌಟುಂಬಿಕ ಜೀವನ ನರಕ ಸದೃಶ್ಯವಾದದ್ದು. ಲೈಂಗಿಕ ಅಲ್ಪಸಂಖ್ಯಾತರ ಅನೇಕ ಹೋರಾಟ, ಒತ್ತಾಯ ಮತ್ತು ಪ್ರತಿಭಟನೆಗಳ ನಂತರ ಎಚ್ಚೆತ್ತ ಸರ್ಕಾರವು ಸಮಾಜದಿಂದ, ಕುಟುಂಬಗಳಿಂದ ತಿರಸ್ಕರಿಸಲ್ಪಟ್ಟ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವತ್ತ ಹೆಜ್ಜೆಯನ್ನಿಟ್ಟಿದೆ. ಆದರೆ, ಮಾಸಿಕ ರೂ 500 ಪಿಂಚಣಿ ಹಣದುಬ್ಬರದ ಈ ದಿನಮಾನಗಳಲ್ಲಿ ಯಾವುದಕ್ಕೂ ಸಾಲದು. ಕೇವಲ ಪುಡಿಗಾಸು ನೀಡಿ ಲೈಂಗಿಕ ಅಲ್ಪಸಂಖ್ಯಾತರ ಕಣ್ಣೀರನ್ನೊರೆಸುವ ಬದಲು, ಸೂಕ್ತ ಶೈಕ್ಷಣಿಕ, ಉದ್ಯೋಗದ ಅವಕಾಶಗಳನ್ನು ಕಲ್ಪಿಸಿ ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಬದುಕನ್ನು ತಾವೇ ಸ್ವಾಭಿಮಾನದಿಂದ ಕಟ್ಟಿಕೊಳ್ಳುವಂತಹ ಕಾರ್ಯಕ್ರಮ, ಯೋಜನೆಗಳನ್ನು ಸರ್ಕಾರ ರೂಪಿಸಿ ಸಮರ್ಪಕವಾಗಿ ಕಾರ್ಯಗತಗೊಳಿಸಲಿ. ಸರ್ಕಾರದ ಆರ್ಥಿಕ ನೆರವಿನ ಜೊತೆ-ಜೊತೆಯಲ್ಲಿಯೇ ಪ್ರಜ್ಞಾವಂತ ನಾಗರೀಕರ ಜವಾಬ್ದಾರಿಯುತ ಸಾಮಾಜಿಕ ನೆರವೂ ಕೂಡ ಈ ನಿಟ್ಟಿನಲ್ಲಿ ಜೊತೆಗೂಡಬೇಕಿದೆ.
- ಪ್ರಶಾಂತ ಹೆಚ್.ವೈ.
ಬಸವ ವಸತಿ ಯೋಜನೆ ಸೂಕ್ತವಾಗಿರಲಿ
ಬಡವರಿಗಾಗಿ ಬಸವ ವಸತಿ ಯೋಜನೆಯಡಿಯಲ್ಲಿ ನಿರ್ಮಿಸಿದ ಮನೆಗಳಿಂದ ಬಡವರಿಗೆ ಹಾಗೂ ಮನೆಯಿಲ್ಲದವರಿಗೆ ಅನೂಕೂಲವಾಗಿದೆ. ಆದರೆ ರಾಜಕಿಯ ಜನರು ಹಣದಾಸೆಯಿಂದ ಆ ಎಲ್ಲಾ ಮನೆಗಳು ಕಳಪೆ ಮಟ್ಟದ್ದಾಗಿದ್ದು ವಸತಿಗೆ ಅಷ್ಟೊಂದು ಯೋಗ್ಯವಾಗಿಲ್ಲ. ಕಾರಣ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಪಾರದರ್ಶಕವಾಗಿ ಮಾಡಬೇಕು. ಸರ್ಕಾರ ಸಾಕಷ್ಟು ಯೋಜನೆ ರೂಪಿಸಿದೆ. ಆದರೆ, ಯಾವುದು ಕಾರ್ಯರೂಪಕ್ಕೆ ತರಲು ಸಾದ್ಯವಾಗುತ್ತಿಲ್ಲ. ಏಕೆಂದರೆ ಇದು ರಾಜಕಾರಣಿಗಳ ಲಂಚವತಾರದ ಪರಿಣಾಮ. ಆದ್ದರಿಂದ ದಕ್ಷ- ನಿಷ್ಠ ಅಧಿಕಾರಿಗಳನ್ನು ಸರ್ಕಾರ ನೇಮಿಸಿ ಅವರಿಗೆ ಅನೂಕೂಲವಾಗುವಂತೆ ಬಡವನಿಗೆ ಆಸರೆಯಾಗಬೇಕಾಗಿದೆ.
- ಅಲ್ಲಾಬಕ್ಷಿ ಎಸ್ ಮಲ್ಲಾರ, ಕೊಪ್ಪಳ
ಈ ಕಾಲೆಳೆಯುವ ಕೆಲಸವೇಕೆ?
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಮರಾಜನಗರಕ್ಕೆ ಹೋಗಿ ಮೂಢನಂಬಿಕೆಯನ್ನು ಅಳಿಸಿ ಹಾಕುವ ಪ್ರಯತ್ನ ಮಾಡಿ ಜಿಲ್ಲೆಯ ಆಭಿವೃದ್ಧಿಗೆಂದು ಹಣಬಿಡುಗಡೆ ಮಾಡಿರುವ ವಿಷಯ ಸ್ವಾಗತಾರ್ಹ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ತಲೆಗೆ ಬಂದಂತೆ ಮಾತನಾಡುತ್ತಿವೆ. ಆಡಳಿತಾರೂಢ ಸರ್ಕಾರ ಅಭಿವೃದ್ಧಿ ಕೆಲಸದಿಂದ ದೂರ ಉಳಿದಾಗ ಎಚ್ಚರಿಸುವುದು ಹೇಗೆ ಉತ್ತಮ ಕೆಲಸವೋ ಅದೇ ರೀತಿ ಸರ್ಕಾರವು ಅಭಿವೃದ್ಧಿ ಯೋಜನೆಯ ದಾರಿಯಲ್ಲಿ ನಡೆಯುವಾಗ ಅದರ ಬೆನ್ನು ತಟ್ಟಿ ಪ್ರೋತ್ಸಾಹಿಸುವುದೂ ವಿರೋಧ ಪಕ್ಷಗಳ ಗುಣವಾಗಬೇಕು. ಆಗ ಮಾತ್ರ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ರಾಜಕೀಯ ಪಕ್ಷಗಳಲ್ಲಿ ಉತ್ತಮ ಸಾಮರಸ್ಯ ಇದ್ದರೆ ಗಾಂಧೀಜಿ ಕಂಡಂತಹ ರಾಮ ರಾಜ್ಯದ ಕನಸು ನಿಜವಾದೀತು.
- ಸಾಗರ್.ಟಿ.ಜಿ. ಮೈಸೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

