ಸಂಪಾದಕೀಯ

ಟೆನಿಸ್ ಆಡುವ ಚೆಲುವೆಯರಿಗೆ ದೇಹದ ಏರಿಳಿತಗಳನ್ನು...

Published On :

ಟೆನಿಸ್ ಆಡುವ ಚೆಲುವೆಯರಿಗೆ ದೇಹದ ಏರಿಳಿತಗಳನ್ನು ಪ್ರದರ್ಶಿಸುವ ಪಾರದರ್ಶಕ 'ಶಾರ್ಟ್ ಫ್ರಾಕ್‌' ಅನಿವಾರ್ಯವಾ?
ಅದು ಪ್ರೇಕ್ಷಕರ ಒತ್ತಾಯದ ಮೇರೆಗೆ.
ಫ್ಯಾಷನ್ ಡಿಸೈನರ್ ಮಧು, 9945737427

ನೇರಲಗುಡ್ಡ ಶಿವಕುಮಾರ್, ಸಿರಾ, 9480343742
ಆಡ್ವಾಣಿ ಕನಸಿನ ಬಿಜೆಪಿ ಕಳೆದು ಹೋಗಿದೆಯಂತೆ?
ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ಕನಸುಗಳಿಗೂ ವಯಸ್ಸಾದಂತೆ ಅನಿಸುತ್ತದೆ.

ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ತಿಳಿದು ಮಾಡೋ ತಪ್ಪಿಗೂ, ತಿಳಿಯದೇ ಮಾಡೋ ತಪ್ಪಿಗೂ ಏನು ವ್ಯತ್ಯಾಸ?
ದೊಡ್ಡೋರು ಹಾಸಿಗೇಲಿ ಮೂತ್ರ ಮಾಡ್ಕೊಳ್ಳೋದಕ್ಕೂ, ಚಿಕ್ಕ ಮಕ್ಕಳು ಮಾಡ್ಕೊಳ್ಳೋದಕ್ಕೂ ಇರುವಷ್ಟೇ ವ್ಯತ್ಯಾಸ!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಹುಡುಗಿಯರನ್ನು ನಿಂಬೆಹಣ್ಣಿನಂತಹ ಹುಡುಗಿ ಅಂತಾರಲ್ಲ ಹಾಗೇ ಹುಡುಗರನ್ನು?
ಚಾಕಲೇಟ್ ಬಾಯ್ ಅಂತಾರೆ. ಯಾವಾಗ್ಲೂ ಹುಡ್ಗೀರಿಗೆ ತಂದ್ಕೊಡ್ತಾ ಇರ್ಲಿ ಅಂತ!

ರವಿಕುಮಾರ ಜಿ.ಬಿ., 9449669897
ಪ್ರತಿಪಕ್ಷದಲ್ಲಿ ಇರುವಾಗ ರಾಜರೋಷವಾಗಿ ಕೂಗಾಡುತ್ತಾರೆ. ಆಡಳಿತ ಪಕ್ಷ ಕ್ಕೆ ಬಂದಾಗ ಕೂಲ್ ಆಗಿಬಿಡುತ್ತಾರೆ ಏಕೆ?
ಅಧಿಕಾರ ಇಲ್ಲದಿರುವವರಿಗೆ ಮಾತ್ರ ಕೂಗಾಡುವ ಅಧಿಕಾರ!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.