ಸಂಪಾದಕೀಯ

ಗ್ರಂಥಾಲಯಗಳಿಗೆ ಬಡತನ

Published On :

ಗ್ರಂಥಾಲಯಗಳು ಜ್ಞಾನದೇಗುಲಗಳು. ಇವುಗಳನ್ನು ರಾಜ್ಯದ ಮೂಲೆ ಮೂಲೆಗಳಲ್ಲೂ ಸರ್ಕಾರ ಸ್ಥಾಪಿಸಿದೆ. ಗ್ರಂಥಾಲಯಗಳ ಉದ್ದೇಶ ಜ್ಞಾನ ಪ್ರಸಾರ. ಕತೆ, ಕಾದಂಬರಿಗಳನ್ನು ಓದುವುದರಿಂದ ಮಾನಸಿಕ ನೆಮ್ಮದಿಯನ್ನೂ ಪಡೆದುಕೊಳ್ಳಬಹುದು. ಎಲ್ಲರಿಗೂ ಹಣವನ್ನು ಕೊಟ್ಟು ಪುಸ್ತಕಗಳನ್ನು ಕೊಳ್ಳುವುದಕ್ಕೆ ಸಾಧ್ಯವಾಗದು. ಅಂಥವರ ಓದಿನ ಹಸಿವನ್ನು ತಣಿಸಲು ಗ್ರಂಥಾಲಯಗಳು ನೆರವಾಗುತ್ತವೆ. ಸರ್ಕಾರದಲ್ಲಿ ಗ್ರಂಥಾಲಯಕ್ಕಾಗಿಯೇ ಪ್ರತ್ಯೇಕ ಇಲಾಖೆ ಇದೆ.
ಸರ್ಕಾರವು ಗ್ರಂಥಾಲಯಗಳಿಗಾಗಿ ಸಾರ್ವಜನಿಕರಿಂದ ತೆರಿಗೆಯನ್ನು ಸಂಗ್ರಹಿಸುತ್ತದೆ. ಬೆಂಗಳೂರು ಮಹಾನಗರದಲ್ಲಿ ಈ ತೆರಿಗೆಯನ್ನು ಬಿಬಿಎಂಪಿ ಸಂಗ್ರಹಿಸುತ್ತದೆ. ಬಿಬಿಎಂಪಿ ಸಂಗ್ರಹಿಸುವ ಒಟ್ಟೂ ತೆರಿಗೆಯಲ್ಲಿ ಶೇ.6ರಷ್ಟು ಗ್ರಂಥಾಲಯ ಇಲಾಖೆಗೆ ಹೋಗಬೇಕು. 2008-09ನೆ ಸಾಲಿನಿಂದ ಇದುವರೆಗೂ ಬಿಬಿಎಂಪಿ ಸಂಗ್ರಹಿಸಿದ ತೆರಿಗೆ 5482 ಕೋಟಿ ರುಪಾಯಿಗಳು. ಇದರ ಶೇ.6ರಷ್ಟು ಎಂದರೆ 296 ಕೋಟಿ ರುಪಾಯಿಗಳನ್ನು ಗ್ರಂಥಾಲಯ ಇಲಾಖೆಗೆ ಬಿಬಿಎಂಪಿ ಕೊಡಬೇಕು. ಆದರೆ ಕೇವಲ 160 ಕೋಟಿ ರುಪಾಯಿ ಮಾತ್ರ ನೀಡಿ 146 ಕೋಟಿ ರುಪಾಯಿಯನ್ನು ಬಾಕಿ ಉಳಿಸಿಕೊಂಡಿದೆ. ಬೆಂಗಳೂರು ಮಹಾನಗರದಲ್ಲಿ 186 ಸಾರ್ವಜನಿಕ ಗ್ರಂಥಾಲಯಗಳು ಇವೆ. ಇವುಗಳಲ್ಲಿ ಹೆಚ್ಚಿನವು ಬಾಡಿಗೆ ಕಟ್ಟಡಗಳಲ್ಲಿ ಇವೆ. ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಬಿಲ್ ಪಾವತಿಸಲೂ ಆಗದ ಸ್ಥಿತಿಯನ್ನು ಗ್ರಂಥಾಲಯ ಇಲಾಖೆ ತಲುಪಿದೆ. ಯಾವ ಉದ್ದೇಶಕ್ಕಾಗಿ ತೆರಿಗೆಯನ್ನು ಸಂಗ್ರಹಿಸಲಾಗಿದೆಯೋ ಅದೇ ಉದ್ದೇಶಕ್ಕೆ ಅದನ್ನು ನೀಡಬೇಕು. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬಿಬಿಎಂಪಿಯಿಂದ ಈ ಹಣ ಗ್ರಂಥಾಲಯ ಇಲಾಖೆಗೆ ಹೋಗುವಂತೆ ಮಾಡಬೇಕು. ಇಲ್ಲವೆ ಬೇರೆ ಯಾವುದಾದರೂ ಮೂಲದಿಂದ ಹಣ ಒದಗಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.