ಕಾಂಚಾಣ ನೋಡಿ ಪ್ರೀತಿ ಪ್ರಣಯ ಮಾಡೋ ಹುಡುಗಿಯರಿಗೆ ಏನನ್ನಬೇಕು?
ಆರೀಫ್ (ಅಪ್ಪು), ದಾವಣಗೆರೆ, 9964280609
ಕಾಂಚಾಣ ನೋಡಿ ಪ್ರೀತಿ ಪ್ರಣಯ ಮಾಡೋ ಹುಡುಗಿಯರಿಗೆ ಏನನ್ನಬೇಕು?
ಆಕೆಯ ಹೆಸರನ್ನು 'ಕಾಂಚನಾ' ಅಂತ ಬದಲಿಸಬೇಕು.
ತಲವಾಟ ಮಂಜು, ಸಾಗರ, 9480931611
ಶ್ರಾದ್ಧ ಮಾಡುವುಜು ಸತ್ತವರ ಆತ್ಮಶಾಂತಿಗೋ ಇಲ್ಲ ಕರ್ಮ ಮಾಡುವವರ ಮನಃಶಾಂತಿಗೋ?
ವಡೆ ತಿನ್ನೋಕಂತೂ ಅಲ್ಲ.
ಕೊ.ಸು. ನರಸಿಂಹಮೂರ್ತಿ, ಚಾಮರಾಜಪುರಂ, ಮೈಸೂರು, 9945271782
ಕೆಲವು ಸರ್ಕಾರಿ ನೌಕರರಿಂದ 'ನೀಲಿ-ಪೋಲಿ' ಚಿತ್ರ ನಿರ್ಮಾಣ ಆಗ್ತಾ ಇದೆಯಂತೆ?
ಕೃಷ್ಣ ಲಕ್ಷ್ಮಣ ಪಾಟೀಲ ಎಂಬವರು ಪ್ರೊಡ್ಯೂಸರಂತೆ!
ರವಿಕುಮಾರ ಜಿ.ಬಿ., 9449669897
ವಿಕೃತ ಕಾಮಿ ಉಮೇಶ್ ರೆಡ್ಡಿ ಚಿತ್ರ ತೆಗೆಯಲು ಪೈಪೋಟಿ ನಡೆಸುತ್ತಾರೆ. ದೇಶಕ್ಕಾಗಿ ಹೋರಾಡಿದವರ ಚಿತ್ರ ತೆಗೆಯಲು ಹಿಂದೇಟು ಹಾಕುತ್ತಾರೆ ಏಕೆ?
ಉಮೇಶ್ ರೆಡ್ಡಿ ಕತೆಯಲ್ಲಿ ಮಸಾಲೆ ಇದೆ. ದೇಶಕ್ಕಾಗಿ ಹೋರಾಡಿದವರದ್ದು ಸರಳ ಕತೆ.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಜೀವನದ ಕಹಿ ಘಟನೆಗಳನ್ನು ಮರೆಯಲು ಕೆಲವರು ಹೆಂಡದ ಮೊರೆ ಹೋಗ್ತಾರಂತೆ?
ಕಹಿಯನ್ನು ಕಹಿಯಿಂದಲೇ ತೆಗೆಯಬೇಕು ಎಂಬ ಸಿದ್ಧಾಂತವದು!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

