ತಾರಾ ಸಮರಕ್ಕೇ ಒಲವು
ರಾಹುಲ ಗಾಂಧಿ ಅವರನ್ನು ಕಾಂಗ್ರೆಸ್ ತನ್ನ ಸಂಭವನೀಯ ಪ್ರಧಾನಿ ಪೀಠದ ಅಭ್ಯರ್ಥಿ ಎಂದು ಘೋಷಿಸದೇ ಹೋದರೂ, ದೇಶದ ಜನರಲ್ಲಿ ಆ ವಿಚಾರದಲ್ಲಿ ಅನುಮಾನವೇ ಇಲ್ಲ. ನರೇಂದ್ರ ಮೋದಿ ಅವರ ಹೆಸರನ್ನು ಬಿಜೆಪಿ ಈಗಾಗಲೇ ಘೋಷಿಸಿದ್ದಾಗಿದೆ. ಪರೋಕ್ಷವಾಗಿ ಅವರಿಬ್ಬರ ನಡುವಣ ರಾಜಕೀಯ ತಾರಾ ಸಮರ ನಡೆದಿದೆ.
ನರೇಂದ್ರ ಮೋದಿ "ಭಾವನಾತ್ಮಕ ಕಾರಣಗಳಿಂದಾಗಿ" ವಾರಾಣಸಿಯನ್ನು ಆರಿಸಿಕೊಂಡರೆ, ಅಲ್ಲಿ ಅವರ ವಿರುದ್ಧ ಸ್ಪರ್ಧಿಸಲು, ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್ ಸಜ್ಜಾಗಿದ್ದಾರೆ. ಅವರ ಹೆಸರನ್ನು ಅವರೇ ಪ್ರಕಟಿಸಿಕೊಂಡಿದ್ದೂ ಆಗಿದೆ.
ತಮ್ಮದೇ ಆದ ವಿಶಿಷ್ಟ ಕಾರಣಗಳಿಂದಾಗಿ ನರೇಂದ್ರ ಮೋದಿ ಗುಜರಾತ್ನ ವಡೋದರವನ್ನು ಆರಿಸಿಕೊಂಡಿದ್ದರೆ, ಸದ್ಯಕ್ಕೆ ಕೇಜ್ರಿವಾಲ್ ಅಂತಹ ಯಾವ ಹೇಳಿಕೆಯನ್ನೂ ನೀಡಿಲ್ಲ. ಅಲ್ಲಿಗೆ ಕಾಶಿಯಲ್ಲಿ ರಾಜಕೀಯ ತಾರಾ ಸಮರಕ್ಕೆ ಭೂಮಿಕೆ ಸಿದ್ಧವಾದಂತೆಯೇ ಆಯಿತು. ಇಲ್ಲಿ ಕಾಂಗ್ರೆಸ್ಸಿನ ಮೆರುಗು ಕಡಿಮೆಯಾದಂತೆಯೇ.
ಕಾಶಿಯ ಸ್ಪರ್ಧೆಗೆ ವ್ಯತಿರಿಕ್ತ ಸ್ವರೂಪವೆನ್ನುವಂತೆ, ರಾಹುಲ ಗಾಂಧಿ ಸ್ಪರ್ಧಿಸುವ ಅಮೇಠಿಯಲ್ಲಿ ಬಿಜೆಪಿ ಅವರ ವಿರುದ್ಧ ಹೂಡಿರುವುದು ತಾರೆ ಸ್ಮೃತಿ ಇರಾನಿ ಅವರನ್ನು. ಈ ಕ್ಷೇತ್ರದಲ್ಲಿ ಸಾಕಷ್ಟು ಸಂಘಟನೆ ಇರುವ ಆಮ್ಆದ್ಮಿ ಪಕ್ಷದ ಅಭ್ಯರ್ಥಿ ಕುಮಾರ ವಿಶ್ವಾಸರಿಗೆ ಪಕ್ಷದ ತಾರಾಮೌಲ್ಯವಂತೂ ಇದ್ದೇ ಇರುತ್ತದೆ.
ಅಮೇಠಿಯ ಪಕ್ಕದಲ್ಲೇ ಇರುವ ಸುಲ್ತಾನಪುರದಲ್ಲಿ, ಬಿಜೆಪಿಯ "ತಾರೆ" ವರುಣಗಾಂಧಿ ಧುಮುಕಿದ್ದಾರೆ. ಸುಲ್ತಾನಪುರದಲ್ಲಿ ಬೇರೆ ಯಾರೇ ನಿಲ್ಲಲಿ, ಅದೂ ಕೂಡಾ ತಾರಾ ಸಮರವೇ. ರಾಜಕೀಯ ಪಕ್ಷಗಳಿಗೆ, ಜನರಿಗೆ ಇಂತಹ ರೋಚಕ ಸ್ಪರ್ಧೆಗಳೇ ಬೇಕೇನೋ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

