ಸಂಪಾದಕೀಯ

ಬಿ.ಎಸ್.ಡಬ್ಲು ವಿದ್ಯಾರ್ಥಿಗಳಿಗೆ ಪ್ರಾಶಸ್ತ್ಯವಿರಲಿ

Published On :

ಸಮಾಜ ಕಾರ್ಯವು (ಂ.ಖ.ಢಿ.) ಒಂದು ಸ್ನಾತಕೋತ್ತರ ಕೋರ್ಸ್ ಆಗಿದ್ದು, ಈ ಕೋರ್ಸ್ ಮೇಲೆ ಸರ್ಕಾರಿ ಹುದ್ದೆಗಳು ತೀರಾ ಕಡಿಮೆಯಾಗಿವೆ. ಅದಕ್ಕಾಗಿ ಸರ್ಕಾರವು ಪಿ.ಡಿ.ಓ. ಹುದ್ದೆಗಳಲ್ಲಿ ಅರ್ಧದಷ್ಟು ಹುದ್ದೆಗಳು
ಎಂ.ಎಸ್.ಡಬ್ಲು ಅರ್ಹತೆ ಹೊಂದಿದವರಿಗೆ ಮಾತ್ರ ಅವಕಾಶ ಕೊಡಬೇಕು. ಸಮಾಜದಲ್ಲಿನ ಸಮಸ್ಯೆಗಳನ್ನೇ, ಬಗೆಹರಿಸಬೇಕಾದ ಸಮಾಜ ಕಾರ್ಯಕರ್ತರೇ ಉದ್ಯೋಗವಿಲ್ಲದೆ, ನಿರುದ್ಯೋಗಿಗಳಾಗಿ ಸಮಾಜಕ್ಕೆ ಇವರೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಾರದು. ಇವತ್ತಿನ ದಿವಸ ಹೆಚ್ಚು ವಿದ್ಯಾರ್ಥಿಗಳು ಎಂ.ಎಸ್. ಡಬ್ಲು ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದು, ಅದಕ್ಕೆ ಅನುಸಾರವಾಗಿ ಸರ್ಕಾರವು ಇದರ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ ಕೆಲವೊಂದು ಸರ್ಕಾರಿ ಹುದ್ದೆಗಳನ್ನು ಮೀಸಲಿಡಬೇಕು.
ಪ್ರಸ್ತುತ ಪ್ರತಿಯೊಂದು ವಿಶ್ವವಿದ್ಯಾಲಯವು ಡಿಗ್ರಿ ಮುಗಿಸಿದವರಿಗೆ ಎಂ.ಎಸ್.ಡಬ್ಲು ಮಾಡಲು ಅವಕಾಶ ಮಾಡಿಕೊಡುತ್ತಿದ್ದು, ಮುಂದಿನ ವರ್ಷದಿಂದ ಬಿ.ಎಸ್.ಡಬ್ಲು ವಿದ್ಯಾರ್ಥಿಗಳಿಗೆ ಮಾತ್ರ ಎಂ.ಎಸ್.ಡಬ್ಲು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಅವಕಾಶ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಇದರಿಂದ ಬಿ.ಎಸ್.ಡಬ್ಲು ಕಾಲೇಜುಗಳು ಅವನತಿ ಹಾದಿ ಹಿಡಿಯುವುದನ್ನು ತಪ್ಪಿಸಿ.
-ಪ್ರಕಾಶ ಮಿರಗಿ, ರಾಣಿ ಚೆನ್ನಮ್ಮ ವಿ.ವಿ., ಬೆಳಗಾವಿ.

ನೆರವು ನೀಡಲು ಮನವಿ
ಕಿಡ್ನಿ ವೈಫಲ್ಯವಾಗಿರುವ ಸುಳ್ಯ ತಾಲೂಕಿನ ಬೆಳ್ಳಾರೆಯ ರೋಶನ್ (8) ಎಂಬ ಬಾಲಕನ ಚಿಕಿತ್ಸೆಗೆ ಆರ್ಥಿಕ ಸಹಾಯ ಬೇಕಾಗಿದೆ ಎಂದು ಆತನ ತಂದೆ ಪುರುಷೋತ್ತಮ ಕೆ, ತಾಯಿ ಭವ್ಯಶ್ರೀ ಮನವಿ ಮಾಡಿದ್ದಾರೆ.
ಬಾಲಕ ಕಂಕನಾಡಿ ಫಾದರ್‌ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎರಡು ಕಿಡ್ನಿಗಳ ಕಸಿಗಾಗಿ ಸುಮಾರು 6 ಲಕ್ಷ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದರ ಜತೆಗೆ ಡಯಾಲಿಸಿಸ್ ಮಾಡಿಸಲು ಮಾಸಿಕ 25 ಸಾವಿರ ವೆಚ್ಚವಾಗಲಿದೆ. ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಬೇಕು. ವಿಕಲ ಚೇತನನಾಗಿರುವ ನಾನು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ನಮಗೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ನಾವು ಈಗ ಹಲವು ಕಡೆ ಸಾಲ ಮಾಡಿ ಮಗನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ಕಿಡ್ನಿ ಕಸಿ ಚಿಕಿತ್ಸೆ ಭರಿಸುವ ಶಕ್ತಿ ನಮಗಿಲ್ಲ ಎಂದು ಮಗುವಿನ ತಂದೆ ಹೇಳಿದ್ದಾರೆ.
ಚಿಕಿತ್ಸೆ ವೆಚ್ಚಕ್ಕೆ ಹಣ ಸಹಾಯ ಮಾಡ ಬಯಸುವವರು ಹಣ ತುಂಬಬೇಕಾದ
ಸಿಂಡಿಕೇಟ್ ಬ್ಯಾಂಕ್, ಖಾತೆ ಸಂ- 02542210006113, ಐಎಫ್‌ಸಿ ಕೋಡ್- ಖಘಃಇ0000254, ಬೆಳ್ಳಾರೆ, ಸುಳ್ಯ ತಾಲೂಕು. ದೂ: 8105702933.


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.