ಸಂಪಾದಕೀಯ

ಕಾಡುಪ್ರಾಣಿಗಳೇಕೆ ನಗರಕ್ಕೆ ವಲಸೆ ಬರುತ್ತವೆ?

Published On :

ಸಿ.ನಾಗರಾಜ, ಅರದೋಟ್ಲು, ಭದ್ರಾವತಿ
ಕಾಡುಪ್ರಾಣಿಗಳೇಕೆ ನಗರಕ್ಕೆ ವಲಸೆ ಬರುತ್ತವೆ?
ಮನುಷ್ಯರು ಆಗಾಗ ಕಾಡಿಗೆ ಪ್ರವಾಸ ಹೋಗುತ್ತಾರಲ್ಲ ಅದಿಕ್ಕೆ.

ಎಂ.ಬಿ. ಕೃಷ್ಣಮೂರ್ತಿ, 9449130531
ಕಾಡಬೇಕು, ಬೇಡಬೇಕು, ಆಗಲೂ ಸಿಗಲಿಲ್ಲ ಅಂದ್ರೆ ಕದೀಬೇಕು ಅಂತಾಳೆ. ಏನನ್ನು ಎಂದು ಹೇಳುವುದಿಲ್ಲವಲ್ಲ?
ಎಲ್ಲವನ್ನೂ ಅವಳೇ ಹೇಳಿಬಿಟ್ಟರೆ ನಿಮಗೇನೂ ಕೆಲಸ ಉಳಿಯೋದಿಲ್ಲವಲ್ಲ.

ವಿ. ಹೇಮಂತಕುಮಾರ, 9035992900
ಮಲಗುವ ಜಾಗ ಬದಲಿಸಿದರೂ ನನ್ನ ಕನಸಿಗೆ ಆ ಚೆಲುವೆಯೇ ಬರ್ತಾಳಲ್ಲ?
ಸೀಟು ಬದಲಿಸಿದಾಕ್ಷಣ ಹೋಗುವ ಊರು ಬದಲಾಗುವುದಿಲ್ಲ!

ಮುರುಡ ನ್ಯಾಮತಿ
ಮದುವೆ ಸಮಯದಲ್ಲಿ ಮುಹೂರ್ತವಾದ ಮೇಲೆ ಹಗಲು ಹೊತ್ತಿನಲ್ಲಿ ಅಶ್ವಿನಿ ನಕ್ಷತ್ರ ತೋರಿಸುತ್ತಾರೆ ಏಕೆ?
ಮದುವೆ ನಂತರ ಬೆಳಗ್ಗೆಯೂ ನಕ್ಷತ್ರ ಕಾಣಬಹುದು ಎಂಬುದರ ಸಂಕೇತವಾಗಿ!

ರವಿಕುಮಾರ ಜಿ.ಬಿ. ಬೆಂಗಳೂರು, 9449669897
ಶಾಸಕರ ವಿದೇಶ ಪ್ರವಾಸದಿಂದ ನಮ್ಮ ರಾಜ್ಯಕ್ಕಾಗುವ ಲಾಭವೇನು?
ಅಷ್ಟು ದಿನ ಅವರಿಂದ ಮುಕ್ತಿ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.