ಶ್ರಮಜೀವಿಗೂ, ಬುದ್ದಿಜೀವಿಗೂ ಇರೋ ವ್ಯತ್ಯಾಸ?
ಜಯಶ್ರೀ ಅಬ್ಬಿಗೇರಿ, ರಾಮದುರ್ಗ
ಹೆಣ್ಣಿನ ತುಟಿಯನ್ನು ಜೇನಿಗೆ, ಮೂಗನ್ನು ಸಂಪಿಗೆಗೆ, ಹುಬ್ಬನ್ನು ಕಾಮನಬಿಲ್ಲಿಗೆ ಹೋಲಿಸುತ್ತಾರೆ ಏಕೆ?
ಮೂಗನ್ನು ಡೊಣಮೆಣಸಿಗೆ ಮತ್ತು ಹುಬ್ಬನ್ನು ಹೆದ್ದಾರಿಗೆ ಹೋಲಿಸಿದರೆ ತುಟಿಯ ಜೇನು ಹೆಜ್ಜೇನಾಗಿ ಕಡಿದೀತು ಎಂಬ ಭಯದಿಂದ!
ದೀಪಾ ಪ್ರಕಾಶ ಹೆಗಡೆ, ಬೆಂಗಳೂರು
ಆಳ್ವಾಸ್ ವಿಶ್ವ ನುಡಿಸಿರಿ ವೈಭವ ನೋಡಿ ಬರಗೂರು ರಾಮಚಂದ್ರಪ್ಪನವರಿಗೇಕೆ ಹೊಟ್ಟೆ ಉರಿ?
ಅಳ್ವರ ಕರ್ಚಿನಲ್ಲೇ ವಿಮಾನದಲ್ಲಿ ಹೋಗಿ ಬಂದು ವೈಭವ ಹೆಚ್ಚಾಯ್ತು ಅನ್ನುವುದು ನಿಜವಾದ ಬಂಡಾಯ!
ಆರ್.ಬಿ. ಚಂದ್ರಶೇಖರ, ಕೆ.ಆರ್. ನಗರ
ಶ್ರಮಜೀವಿಗೂ, ಬುದ್ದಿಜೀವಿಗೂ ಇರೋ ವ್ಯತ್ಯಾಸ?
ಶ್ರಮಪಟ್ಟರೂ ಪ್ರಚಾರ ಪಡೆಯದವರು. ಕೆಲಸ ಮಾಡದೇ ಪ್ರಚಾರ ಪಡೆಯುವವರು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಲವ್ಗಾಗಿ ಹೃದಯದ ಚಿಹ್ನೆಯೇ ಯಾಕೆ?
ಕುಟುಂಬ ಯೋಜನೆ ಚಿಹ್ನೆ ಸೂಕ್ತ ಅಂತೀರಾ!
ಪಿ.ಜಿ. ರಾಜ್, ಶಿವಮೊಗ್ಗ, 9739363071
ಹೆಣ್ಣು ಕೆಟ್ಟರೆ 'ನಾಯಿ ಮುಟ್ಟಿದ ಮಡಕೆ' ಎನ್ನುತ್ತಾರೆ. ಅದೇರೀತಿ ಗಂಡು ಕೆಟ್ಟರೆ?
ನಾಯಿಗೆ ಮೈಲಿಗೆಯಿಲ್ಲ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

