ಸಂಪಾದಕೀಯ

ಬದುಕಿದ್ದಾಗ ಪ್ರೀತಿಸದ ಜನ ಸತ್ತ ನಂತರ ಹೆಚ್ಚಾಗಿ ಪ್ರೀತಿಸುತ್ತಾರೇಕೆ?

Published On :

ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ಬದುಕಿದ್ದಾಗ ಪ್ರೀತಿಸದ ಜನ ಸತ್ತ ನಂತರ ಹೆಚ್ಚಾಗಿ ಪ್ರೀತಿಸುತ್ತಾರೇಕೆ?
ಇಲ್ಲದಾಗಲೇ ಪ್ರಾಮುಖ್ಯ ಅರಿವಾಗುವುದು.

ವಿ. ಹೇಮಂತಕುಮಾರ, ಬೆಂಗಳೂರು, 9035992900
ನಾ ಕಾಣೋ ಕನಸಿಗೆ ನಾಯಕನಾಗು, ನಾ ನಡೆಯೋ ದಾರಿಯಲ್ಲಿ ನನ್ನ ನೆರಳಾಗು ಅಂತಿದ್ದಾಳಲ್ಲ?
ಧೂಮ್ 3 ಯಂತಹ ಕನಸು ಕಾಣಬೇಡ ಅಂತ ಬೇಡಿಕೊ!

ಡಬ್ಲ್ಯು.ಕೆ. ವೆಂಕಟೇಶಮೂರ್ತಿ, ಭೂಪಸಂದ್ರ, ಬೆಂಗಳೂರು
ನಿತ್ಯಾನಂದರು ವಿವಾದಿತ ಸ್ವಾಮಿಯಾದರೂ ಅವರ ಆನಂದಕ್ಕೇನೂ ಕೊರತೆಯಾದಂತಿಲ್ಲ?
ಆನಂದಮಯಿ ಜತೆಯಲ್ಲಿದ್ದಾಗ ಆನಂದಕ್ಕೆ ಕೊರತೆಯೇ!

ಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9008741348
ಅಬ್ಬರಿಸಿ ಬೊಬ್ಬಿಡುವ ಬಹುತೇಕ ಗಂಡಸರು ಹೆಂಡತಿ ಮುಂದೆ ಇಲಿಯಂತಾಗುತ್ತಾರಲ್ಲಾ?
ಎಂತಹ ಹುಲಿಯನ್ನೂ ಪಳಗಿಸಬಹುದು ಎಂಬುದಕ್ಕೆ ಇದೇ ಸಾಕ್ಷಿ!

ಓಂಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9001257131
ರೋಡ್ ಬ್ರೇಕರ್ ಇರದಿದ್ರೂ ಕೂಡ ಎಲ್ಲಾ ವಾಹನಗಳೂ ಮಹಿಳಾ ಕಾಲೇಜ್‌ಬಳಿ ನಿಧಾನವಾಗಿ ಚಲಿಸುತ್ತವಲ್ಲಾ?
ಇದು ನೈಸರ್ಗಿಕ ಸ್ಪೀಡ್ ಬ್ರೇಕರ್.


-ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.