ಬೆಂಕಿ ಇದ್ದಲ್ಲಿ ಹೊಗೆಯಾಡುತ್ತದೆ. ಪ್ರೀತಿಯಿದ್ದಲ್ಲಿ?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಬೆಂಕಿ ಇದ್ದಲ್ಲಿ ಹೊಗೆಯಾಡುತ್ತದೆ. ಪ್ರೀತಿಯಿದ್ದಲ್ಲಿ?
ಅಸೂಯೆ, ದ್ವೇಷ ಆವಿಯಾಗುತ್ತದೆ.
ಚಿರಪ್ರಭ ನಂಜನಗೂಡು, 8553793107
ಕೇಜ್ರಿವಾಲ್ ಕೈ ಪಕ್ಷದ ಅಂಗೈ ಅರಗಿಣಿಯಾಗಿ ಬಿಟ್ಟಿದ್ದಾರಲ್ಲ?
ಅದಕ್ಕೆ ಬಿಜೆಪಿಯವರು ನೀನೇ ಸಾಕಿದಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ ಅಂತ ಹಾಡ್ತಾ ಇದ್ದಾರಂತೆ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ನನ್ನವಳ ಜಡೆ ಇಲ್ಲದ ತಲೆಗೆ ಹೂ ಹೇಗೆ ಮುಡಿಸಲಿ?
ಕಿವಿಗೆ ಇಟ್ಟು ನೋಡು!
ಕೆ.ಎಂ. ಲಿಂಗರಾಜು, 9916021365
ಬುದ್ಧಿಜೀವಿ ಪದವಿ ಪಡೆದುಕೊಳ್ಳಲು ತಲೆಯಲ್ಲಿ ಶೇಕಡಾ ಎಷ್ಟು ಪ್ರಮಾಣದ ಬುದ್ಧಿಯಿರಬೇಕು?
ಬುದ್ಧಿ ಇಲ್ಲದಿದ್ದರೂ ಇದೆಯೆಂದು ತೋರಿಸಿಕೊಳ್ಳುವ ಬುದ್ಧಿ ಮೊದಲು ಇರಬೇಕು!
ಪಿ.ಜೆ. ರಾಜ್ ಶಿವಮೊಗ್ಗ, 9739363071
ಸಜ್ಜನರ ಸಂಗ ಹೆಜ್ಜೇನು ಸವಿದಂತೆ. ಪ್ರೇಮಿಗಳ ಸಂಗ?
ಹೆಜ್ಜೇನು ಕಡಿದಂತೆ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

