ಹಳೆಯ ನೋಟುಗಳ ವಿಚಾರ
2005ಕ್ಕೂ ಮುಂಚೆ ಮುದ್ರಿತವಾದ ಎಲ್ಲ ಹಳೆಯ ನೋಟುಗಳನ್ನೂ ಹಿಂದಕ್ಕೆ ಪಡೆಯಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಈಗಾಗಲೇ ಅನೌಪಚಾರಿಕವಾಗಿ, ಹೆಚ್ಚು ಪ್ರಚಾರವಿಲ್ಲದೇ ಇಂತಹ ನೋಟುಗಳನ್ನು ಬ್ಯಾಂಕ್ಗಳು ಕಳಿಸಿದಾಗ, ಅದನ್ನು ರಿಸರ್ವ್ ಬ್ಯಾಂಕ್ ಮತ್ತೆ ಚಲಾವಣೆಗೆ ಬಿಡುತ್ತಿಲ್ಲ. ನಾಶಪಡಿಸುತ್ತಿದೆ.
ಈಗ ಈ ವಿಚಾರದಲ್ಲಿ ರಿಸರ್ವ್ ಬ್ಯಾಂಕ್ ಅಧಿಕೃತವಾಗಿ ಒಂದು ಪ್ರಕಟಣೆಯನ್ನೇ ಹೊರಡಿಸಿರುವುದು, ದೇಶದಲ್ಲಿ ಸ್ವಲ್ಪ ಮಟ್ಟಿಗೆ ಅಲ್ಲ ಕಲ್ಲೋಲವನ್ನು ಉಂಟು ಮಾಡಬಹುದು. ಸಾರ್ವಜನಿಕರು ಯಾವ ರೀತಿಯಲ್ಲೂ ಈಗ ಆತಂಕ ಪಡಬೇಕಾಗಿಲ್ಲವೆಂದು ರಿಸರ್ವ್ ಬ್ಯಾಂಕೇ ಭರವಸೆ ನೀಡಿದೆ. ಮಾರ್ಚ್ 31 ರ ವರೆಗೂ ಹಳೆಯ ನೋಟುಗಳ ಚಲಾವಣೆ ನಡೆಯಬಹುದು. ಅನಂತರವೂ ಹಳೆಯ ನೋಟುಗಳು ಇದ್ದರೆ, ಅದನ್ನು ಬ್ಯಾಂಕ್ಗಳಿಗೆ ಕೊಟ್ಟು ಬೇರೆ ನೋಟುಗಳನ್ನು ಪಡೆಯಬಹುದು. ಹಳೇ ನೋಟುಗಳನ್ನು ಕಾನೂನು ಬಾಹಿರವಾದ ನೋಟುಗಳೆಂದೇನೂ ರಿಸರ್ವ್ ಬ್ಯಾಂಕ್ ಹೇಳಿಲ್ಲ. ಹಾಗಿದ್ರೆ ಮಾರ್ಚ್ 31 ರ ಗಡುವನ್ನೇಕೆ ಹಾಕಿದ್ದು. ಹಳೆಯ ನೋಟುಗಳೂ ಕಾಯಿದೆ ಬದ್ಧವಾಗಿದ್ದರೆ, ಅದನ್ನು ಈಗ ಮಾಡುತ್ತಿರುವಂತೆಯೇ ಚಲಾವಣೆಯಿಂದ ಹೊರಗೆ ಇಡಬಹುದಾಗಿತ್ತಲ್ಲ ಎನ್ನುವ ಪ್ರಶ್ನೆ ಸಹಜ. ಈಗ ಅಲ್ಲಲ್ಲಿ ಕಾಣಿಸಿಕೊಂಡಿರುವ ನಕಲಿ ನೋಟುಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹಳೆಯ ನೋಟುಗಳೇ ಇರುವುದರಿಂದ, ನಕಲಿ ನೋಟುಗಳ ಚಲಾವಣೆ (ಮೋಸ) ಈಗಿನ ಕ್ರಮದಿಂದ ತಾನೇ ತಾನಾಗಿ ನಿಂತು ಹೋಗುತ್ತದೆ. ಹಳೆಯ ನೋಟುಗಳ ರೂಪದಲ್ಲೇ ತಮ್ಮ ಅಘೋಷಿತ ಸಂಪತ್ತನ್ನು ಇಟ್ಟುಕೊಂಡಿರುವವರು, ನೋಟುಗಳ ಬದಲಾವಣೆಗೆ ಬಂದಾಗ ಅದು ದಾಖಲಾಗುತ್ತದೆ. ದೊಡ್ಡ ಪ್ರಮಾಣದ ನಗದು ವ್ಯವಹಾರದ ಮೇಲೆ ನಿಗಾ ಇಟ್ಟಿರುವ ರಿಸರ್ವ್ ಬ್ಯಾಂಕ್ ಮತ್ತು ಆದಾಯ ತೆರಿಗೆ ಇಲಾಖೆ ಅಂಥವರ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ನೆರವು ಸಿಗುತ್ತದೆ. ಬ್ಯಾಂಕ್ಗಳು ಏಪ್ರಿಲ್ ಒಂದರ ಅನಂತರವೂ ಹಳೆಯ ನೋಟುಗಳ ವಿನಿಮಯದ ಕೆಲಸವನ್ನು ಮುಂದುವರಿಸುತ್ತವೆ. ಇದು ಮುಕ್ತ ವ್ಯವಹಾರ. ಸಾರ್ವಜನಿಕರು ಖಾತೆ ಹೊಂದಿರುವ ಬ್ಯಾಂಕ್ಗಳಲ್ಲಿ ನೋಟುಗಳ ವಿನಿಮಯ ಸಮಸ್ಯೆಯೇ ಅಲ್ಲ. ಬ್ಯಾಂಕ್ ಖಾತೆ ಇಲ್ಲದ ಗ್ರಾಹಕರು ತಮ್ಮ ಗುರ್ತಿನ ಚೀಟಿಯನ್ನು ತೋರಿಸ ಬೇಕಾಗುತ್ತದೆ. ಅದೇನೂ ದೊಡ್ಡ ವಿಚಾರವಲ್ಲ.
ಈ ಕ್ರಮದಿಂದ ಕಳ್ಳ ಹಣದ ಚಲಾವಣೆ ಕಡಿಮೆಯಾಗಬಹುದೇ? ಖಂಡಿತವಾಗಿಯೂ ಚಲಾವಣೆ ಸಾಧ್ಯವಿಲ್ಲದ ನೋಟುಗಳಿಂದೇನು ಪ್ರಯೋಜನ? ಆ ನೋಟುಗಳು ಹೊರಗೆ ಬರಲೇಬೇಕಲ್ಲ. ಆಗ ಸ್ವಲ್ಪ ಮಟ್ಟಿಗಾದರೂ ಕಪ್ಪು ಹಣ ಬೀದಿಗೆ ಬರುತ್ತದೆ.
2005 ರಲ್ಲಿ ದೇಶದಲ್ಲಿ 360,000 ಕೋಟಿ ರುಪಾಯಿಗಳ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು ಈಗ 116000 ಕೋಟಿ ರುಪಾಯಿಗಳ ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ. ಈಗಿನ ಕ್ರಮದಿಂದ ಸ್ವಲ್ಪ ಮಟ್ಟಿಗಾದರೂ ಹಣದ ಚಲಾವಣೆ ಕಡಿಮೆಯಾಗುವ ನಿರೀಕ್ಷೆಯೂ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

