ಸಂಪಾದಕೀಯ

ಕಣ್ಣಲ್ಲಿ ಕಣ್ಣಿಟ್ಟು ನೋಡೋಕಾಗುತ್ತಾ?

Published On :


ಕಾಲ್‌ಸೆಂಟರ್ ಶಿವಕುಮಾರ, ನಂಜಾಪುರ, ರಾಮನಗರ
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಂಜಿತಾ ಅ ಮಾ ಆನಂದಮಯಿ ಚಿತ್ರಪ್ರದರ್ಶನವಾಗುವ ಸಂಭವ ಇದ್ಯಾ?
ಸಿಡಿ ಇದ್ರೆ ಕಳುಹಿಸಿಕೊಡಿ ಅಂದ್ರಂತೆ ಪಾಲೆಮಾರಿನ ಕೃಷ್ಣ!


ಕೊ. ಸು. ನರಸಿಂಹಮೂರ್ತಿ
ರಾಜಕಾರಣಿಗಳು 'ಸೇವ್ ದಿ ನೇಷನ್‌' ಎಂಬುದನ್ನು 'ಶೇವ್ ದಿ ನೇಷನ್‌' ಅಂದುಕೊಂಡರಾ?
ಬಹುಸಂಖ್ಯೆಯ ರಾಜಕಾರಣಿಗಳಿಗೆ ಅಷ್ಟೆಲ್ಲ ಇಂಗ್ಲಿಷು ಬರೋದಿಲ್ಲ, ಹೆದರಬೇಡಿ!

ಸಂತೇಬೆನ್ನೂರು ಫೈಜ್ನಟ್ರಾಜ್
ಕಣ್ಣಲ್ಲಿ ಕಣ್ಣಿಟ್ಟು ನೋಡೋಕಾಗುತ್ತಾ?
ನೋಡಿದ ನಂತರದ ಪರಿಣಾಮಗಳ ಬಗ್ಗೆ
ಯೋಚಿಸುವುದೊಳಿತು.


ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಸೌಂದರ್ಯ ಒಂದು ಶಕ್ತಿಯಾದರೆ, ಮುಗುಳ್ನಗೆ?
ಆ ಶಕ್ತಿಯನ್ನು ಆ್ಯಕ್ಟಿವೇಟ್ ಮಾಡುವ ಸ್ಪಾರ್ಕ್‌ಪ್ಲಗ್.

ಅಶೋಕ ಕಾರೇಕುರ 8892320820
ಹಳ್ಳಿಯಲ್ಲಿ ಆಚೀಚೆ ಬೀದಿಗಳೂ ಪರಿಚಿತ. ಸಿಟಿಯಲ್ಲಿ ಹಕ್ಕದ ಮನೆಯವನ ಹೆಸರು ಕೇಳಿದರೂ ಆಕಾಶ ನೋಡ್ತಾರಲ್ಲ?
ಸಿಟಿಯವರು ಆಕಾಶಕ್ಕೆ ಹಬ್ಬಿದ ಅಪಾರ್ಟ್‌ಮೆಂಟ್‌ಗಳಲ್ಲಿರುತ್ತಾರಲ್ಲ...


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.