ಸಂಪಾದಕೀಯ

ಉತ್ತರವೇ ಸಿಗದ ಪ್ರಶ್ನೆ ಯಾವುದು?

Published On :

ಶಂಕರನಾರಾಯಣ ಭಟ್, 9632821920
ಉಳಿದೆಲ್ಲ ವಿಭಾಗಗಳಲ್ಲಿ ಮಹಿಳೆ ಎರಡು ಹೆಜ್ಜೆ ಮುಂದೆಂದುಕೊಂಡರೂ 'ಕೇಳ್ರಪ್ಪೊ ಕೇಳಿ'ಯಲ್ಲಿ ಹಿಂದೇಕೆ?
ನಿಮ್ಹತ್ರ ಕೇಳೋಕೇನಿದೆ ಎಂಬ ವರಸೆ!

ರವಿಕುಮಾರ್ ಜಿ. ಬಿ. 9449669897
ಉತ್ತರವೇ ಸಿಗದ ಪ್ರಶ್ನೆ ಯಾವುದು?
ನಮ್ಮ ಉತ್ತರಗಳಿಗೆ ಮೇಷ್ಟ್ರು ಅದೇಕೆ ಆ ಪರಿ ಕಡಿಮೆ ಅಂಕ ಕೊಡುತ್ತಿದ್ದರು ಅನ್ನೋದು.

ಹರಳಹಳ್ಳಿ ಪುಟ್ಟರಾಜು, 9632838088
ಬೌಲರ್ಸ್ ಏಕೆ ಚೆಂಡನ್ನು ತಮ್ಮ ತೊಡೆಗೆ ಉಜ್ಜಿಕೊಳ್ಳುತ್ತಾರೆ?
ಹೊಟ್ಟೆಗೆ ಉಜ್ಜಿಕೊಂಡರೆ ಆಗಲೂ ನೀವು ಅದೇಕೆ ಹಾಗೆ ಎಂದು ಕೇಳುತ್ತಿದ್ದಿರಿ!

ನೆಲಮಂಗಲ ಮಹೇಶ್
ಅನ್ನದ ಮುಂದೆ ದೇವರಿಲ್ಲ. ಹುಡುಗಿಯರ ಮುಂದೆ?
ಯಾರೂ ಇಲ್ಲ. ಏಕೆಂದರೆ ಎಲ್ಲರೂ ಹುಡುಗಿಯರ ಹಿಂದಿರುತ್ತಾರೆ!


ವಿ. ಹೇಮಂತಕುಮಾರ, 9035992900
ಹುಡುಗಿಯರ ಮಾತುಗಳೆಲ್ಲ ಒಗಟಿನಂತೆ ಇರುತ್ತವೆ ಏಕೆ?
ಬುದ್ಧಿವಂತರಿಗೆ ಮಾತ್ರ ಅರ್ಥವಾದರೆ ಸಾಕು ಎಂದು!


 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.