ಬನವಾಸಿಗೊಂದು ಪ್ರಾಧಿಕಾರ ಬೇಕೆ?
ಇತ್ತೀಚೆಗೆ ಬನವಾಸಿ ಉತ್ಸವವನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು, "ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು" ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕರ್ನಾಟಕ ರಾಜ್ಯ ಗೆಜೆಟ್ ವಿಶೇಷ ಪತ್ರಿಕೆಯಲ್ಲಿ ದಿ. 15.12.2011ರಲ್ಲಿ ಪ್ರಕಟವಾಗಿರುವಂತೆ, ಈಗಾಗಲೇ ಶಿವಮೊಗ್ಗ, ಉತ್ತರಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸೇರಿಸಿ "ಸಹ್ಯಾದ್ರಿ ಪರಂಪರೆ" ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2011 (35) ಮಸೂದೆ ವಿಧಾನಸಭೆಯಲ್ಲಿ ಅನುಮೋದನೆಗೊಂಡು ರಾಜ್ಯಪಾಲರ ಅನುಮತಿಯೂ ದೊರಕಿರುತ್ತದೆ. ಸಂಪುಟದ ಒಪ್ಪಿಗೆಯೂ ದೊರಕಿದ್ದು, 2010-11ರ ಬಜೆಟ್ನಲ್ಲಿ ಘೋಷಣೆಯಾಗಿ ರು. 20 ಕೋಟಿಯನ್ನು ಮೀಸಲಾಗಿರಿಸಿದೆ. ಕರ್ನಾಟಕ ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆಗೆ 2010-11 ಮತ್ತು 2011-12ರಲ್ಲಿ ತಲಾ 6 ಕೋಟಿಯಂತೆ 12 ಕೋಟಿ ಹಣವೂ ಬಿಡುಗಡೆಯಾಗಿದೆ.
"ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ಸಮಿತಿ" ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ರಚನೆಯಾಗುವ ಹಂತದಲ್ಲಿ ಕಡತವು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದಲ್ಲಿದೆ. ಕರ್ನಾಟಕ ಸರ್ಕಾರ ಆದಷ್ಟು ಬೇಗ ಮೇಲ್ಕಂಡ ಪ್ರಾಧಿಕಾರದ ಸಮಿತಿಯನ್ನು ರಚಿಸಿ, ಶಿವಮೊಗ್ಗ ಜಿಲ್ಲೆ ಕೇಂದ್ರವನ್ನಾಗಿಸಿ ಮೂರು ಪ್ರಮುಖ ಜಿಲ್ಲೆಗಳಾದ ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪ್ರಾಚೀನ ಸ್ಮಾರಕಗಳು ಕೋಟೆ ಕೊತ್ತಲಗಳು ಪಾರಂಪರಿಕ ಐತಿಹಾಸಿಕ ಕಟ್ಟಡಗಳ ಸಂರಕ್ಷಣೆ, ಸಾಂಸ್ಕೃತಿಕ ಉತ್ಸವಗಳನ್ನು ಏರ್ಪಡಿಸಲು ಮುಂದಾಗಬೇಕಿದೆ. ಬನವಾಸಿ ಮಧುಕೇಶ್ವರ ದೇವಾಲಯ ಮತ್ತಿತರ ಸ್ಮಾರಕಗಳು ಈಗಾಗಲೇ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ್ದು ಸಂರಕ್ಷಣೆಗೊಳ್ಳುತ್ತಿವೆ. ಒಂದೇ ಉದ್ದೇಶಕ್ಕೆ ಎರಡು ಪ್ರಾಧಿಕಾರಗಳು ಬೇಕೇ? ಈಗಾಗಲೇ ಅನುಮೋದನೆ ಆಗಿರುವ ಸಹ್ಯಾದ್ರಿ ಅಭಿವೃದ್ಧಿ (ಪರಂಪರೆ) ಪ್ರಾಧಿಕಾರ ವಿಧೇಯಕಕ್ಕೆ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಪೂರ್ಣಪ್ರಮಾಣದ ಸಮಿತಿ ರಚಿಸಿ ಚಾಲನೆ ನೀಡಬೇಕಾಗಿ ಕೋರುತ್ತೇನೆ.
- ಜಯದೇವಪ್ಪ ಜೈನಕೇರಿ, ಶಿವಮೊಗ್ಗ.
ನೆರವು ನೀಡಲು ಮನವಿ
ನಾನು ವೆಂಕಟೇಶ್, ದಿವಂಗತ ತಿಮ್ಮೇಗೌಡರ ಮಗ. ಅರೆ ತಿಪ್ಪೂರು, ಕೂಳಗೆರೆ ಪೋಸ್ಟ್, ಮದ್ದೂರು ತಾ. ಮಂಡ್ಯ ಜಿಲ್ಲೆಯಲ್ಲಿ ವಾಸವಾಗಿದ್ದೇನೆ. ನಾನು ವೃತ್ತಿಯಲ್ಲಿ ದಿನಗೂಲಿ ಕಾರ್ಮಿಕನಾಗಿದ್ದು ಈ ನಡುವೆ ನನ್ನ ಎರಡೂ ಮೂತ್ರ ಪಿಂಡಗಳು ವಿಫಲಗೊಂಡಿದ್ದು ಈಗಾಗಲೇ ಚಿಕಿತ್ಸೆಗೆ 2 ಲಕ್ಷ ರು.ಗಳು ಖರ್ಚಾಗಿದೆ. ಇದನ್ನು ಸಹ ಸಾಲ ಮಾಡಿ ಖರ್ಚು ಮಾಡಿರುತ್ತೇನೆ.
ನನಗೆ ಇಬ್ಬರು ಮಕ್ಕಳಿದ್ದು, ಸಂಸಾರವನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ.
ಇದರ ಜೊತೆಗೆ ಸಾಲಗಾರರು ಹಣ ಹಿಂತಿರುಗಿಸಲು ಒತ್ತಾಯಿಸುತ್ತಿದ್ದಾರೆ. ಇನ್ನು ಮುಂದೆಯೂ ನನ್ನ ಮೂತ್ರಪಿಂಡ ಕೆಲಸ ಮಾಡಲು ಸಾಧ್ಯವಿಲ್ಲವಾದ್ದರಿಂದ ರಕ್ತಶುದ್ಧೀಕರಣ (ಡಯಾಲಿಸಿಸ್) ಮಾಡಿಸಬೇಕಾಗಿರುವುದರಿಂದ ವಾರಕ್ಕೆ 5ರಿಂದ 6 ಸಾವಿರ ರು. ಖರ್ಚಾಗುತ್ತದೆ. ಈ ಹಣವನ್ನು ನನಗೆ ಭರಿಸಲು ಸಾಧ್ಯವಾಗದ ಕಾರಣ ಸಾರ್ವಜನಿಕರು ಸಹಾಯಹಸ್ತ ನೀಡುವಂತೆ ಕೇಳಿಕೊಳ್ಳುತ್ತೇನೆ.
- ವೆಂಕಟೇಶ್, ವಿಜಯ ಬ್ಯಾಂಕ್, ಖಾತೆ ಸಂಖ್ಯೆ 132101011002352, ಐಋಡ್ಛ ಈ್ಟಜಜ- ಗಐಒಇ0001321. ಮೊಬೈಲ್ ಸಂಖ್ಯೆ 973950 1968, 9980941300, 9980737080
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

