ಸಿನಿಮಾ ತಾರೆ ಮತ್ತು ರಾಜಕಾರಣಿ ಇಬ್ಬರಲ್ಲಿ ರಿಯಲ್ ಹೀರೋ ಯಾರು?

Updated on: 

ಸಿ. ನಾಗರಾಜ ಅರದೋಟ್ಲು,ಭದ್ರಾವತಿ
ಈಗಿನ ಹುಡುಗಿಯರಿಗೆ ಮದುವೆ ಆಗಿದೆಯೆಂದು ತಿಳಿಯಲು ಕಷ್ಟವಾಗುತ್ತದಂತೆ?
ಅದನ್ನು ತಿಳಿದುಕೊಂಡು ಆಗಬೇಕಾಗಿರುವುದಾದರೂ ಏನು!


ವಿ. ಹೇಮಂತಕುಮಾರ,
ಬೆಂಗಳೂರು, 9901739104
ಪ್ರೇಯಸಿಯೊಂದಿಗೆ 'ಬೈಟುಕಾಫಿ' ಕುಡಿಯುವುದಕ್ಕೂ ಬೈಟು ಕಾಫಿ ಓದುವುದಕ್ಕೂ ವ್ಯತ್ಯಾಸವೇನು?
'ಬೈಟು ಕಾಫಿ' ಓದುವಾಗ ಸಲ್ಲಾಪದ ಥಿಯರಿ, ಬೈಟು ಕಾಫಿ ಹೀರುವಾಗ ಪ್ರಾಕ್ಟಿಕಲ್ನ ಮುನ್ನುಡಿ!


ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಸಿನಿಮಾ ತಾರೆ ಮತ್ತು ರಾಜಕಾರಣಿ ಇಬ್ಬರಲ್ಲಿ ರಿಯಲ್ ಹೀರೋ ಯಾರು?
ಎರಡೂ ಆದವರು!

ಫ್ಯಾಷನ್ ಡಿಸೈನರ್ ಮಧು, 9945737427
ರೈಲಿನಂತೆ ಅವಳ ಹೃದಯದ ಫ್ಲಾಟ್ಫಾರಂನಲ್ಲಿ ನಿಂತಿದ್ದರೂ ಮುಂದೆ ಬಾ ಅಂತ ಅವಳು ಹಸಿರು ಬಾವುಟ ತೋರುತ್ತಿಲ್ಲವಲ್ಲ?
ಫ್ಲ್ಲಾಟ್ಫಾರಂನಲ್ಲಿದ್ದಾಗ ಹಸಿರು ಬಾವುಟ ತೋರಿದರೆ ಫ್ಲಾಟ್ಫಾರಮ್ನಿಂದ ಹೊರಡು ಎಂದರ್ಥ!



 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com