ಕ್ರಿಕೆಟ್ ಪಂದ್ಯಾಟದ ವೇಳೆ ಚಿಯರ್ ಬೆಡಗಿಯರ ಕುಣಿತದಿಂದ ಯಾರಿಗೆ ಲಾಭ?

Updated on: 

ತಲವಾಟ ಮಂಜುನಾಥ, 9480931611
ಹೊಸದಾಗಿ ಲವ್ ಮಾಡುವವರಿಗೆ ಒಂದು ಲವ್ ಕೋಚಿಂಗ್ ಕ್ಲಾಸ್ ಪ್ರಾರಂಭಿಸುವಾಸೆ. ನಿಮ್ಮ ಅಭಿಪ್ರಾಯವೇನು?
ಜತೆಗೆ ಪ್ರೇಮ ವೈಫಲ್ಯವನ್ನು ನಿಭಾಯಿಸುವುದು ಹೇಗೆ ಎಂಬ ಸೈಡ್ ಬಿಸಿನೆಸ್ ಕೂಡ ಆರಂಭಿಸಬಹುದು!

ಐಗೂರು ಮೋಹನ್‌ದಾಸ್, ಕೊಡಗು, 9483327936
ಕ್ರಿಕೆಟ್ ಪಂದ್ಯಾಟದ ವೇಳೆ ಚಿಯರ್ ಬೆಡಗಿಯರ ಕುಣಿತದಿಂದ ಯಾರಿಗೆ ಲಾಭ?
ನೋಡುಗರಿಗೆ!

ಶ್ರೀಧರ ಡಿ. ರಾಮಚಂದ್ರಪ್ಪ, 9880791106
ಕುರುಡ ಮತ್ತು ಕುಡುಕ ಎರಡರ ನಡುವೆ ವ್ಯತ್ಯಾಸವೇನು?
ಒಬ್ಬನಿಗೆ ಕಣ್ಣು ಕಾಣದು, ಇನ್ನೊಬ್ಬನಿಗೆ ಕಣ್ಣಿದ್ದರೂ ಮುಚ್ಚಿಕೊಂಡಿರುತ್ತದೆ!

ಶಿಲ್ಪಿ ರಮೇಶ್, ಸಂತೇಮಾಳ ಬನ್ನೂರು
ನೆನಪಾದ ಪ್ರಶ್ನೆಗಳು ಬರೆಯುವುದರೊಳಗೆ ಮಾಯವಾಗುವುದೇಕೆ?
ಮನಸ್ಸಿಗೆ ಬಂದಿದ್ದು ಬಾಯಿಗೆ ಬರುತ್ತಿಲ್ಲ ಅಂದ್ರೆ ಇದೇ ನೋಡಿ!

ನಂದ ಯಡಿಯೂರು, 9880055196
ಇತ್ತೀಚೆಗೆ ಸೀರೇನೇ ಮಾಯವಾಗಿದೆಯಲ್ಲ?
ಪುಣ್ಯಕ್ಕೆ ಅದರ ಬದಲಿಗೆ ಬೇರೆ ಬಂದಿದೆಯಲ್ಲ!

 ಬಾಣಭಟ್ಟ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com