ಕಳೆದ ಒಂದು ತಿಂಗಳಲ್ಲಿ ಮೋದಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆಯಲ್ಲಿ ಇಳಿಕೆ!

ಬಿಜೆಪಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ ಕಳೆದ ಒಂದು ತಿಂಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಸಿ-ವೋಟರ್-ಐಎಎನ್ಎಸ್ ಸಮೀಕ್ಷೆ ಹೇಳಿದೆ.
ಮೋದಿ
ಮೋದಿ
Updated on: 
ನವದೆಹಲಿ: ಬಿಜೆಪಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ ಕಳೆದ ಒಂದು ತಿಂಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಸಿ-ವೋಟರ್-ಐಎಎನ್ಎಸ್ ಸಮೀಕ್ಷೆ ಹೇಳಿದೆ. 
ಬಾಲಾಕೋಟ್ ವೈಮಾನಿಕ ದಾಳಿ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅನುಮೋದಿಸುವವರ ಪ್ರಮಾಣ ಶೇ.62.06 ರಷ್ಟಿತ್ತು ಆದರೆ ಮಾ,12  ರಿಂದ ಏ.12 ವರೆಗೆ ಮೋದಿ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ 12 ಅಂಕಗಳಷ್ಟು ಕಡಿಮೆಯಾಗಿದೆ ಎಂದು ಸಿ-ವೋಟರ್-ಐಎಎನ್ಎಸ್ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. 
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅನುಮೋದಿಸುವವರ ಸಂಖ್ಯೆ ಮಾ.22 ವರೆಗೆ 50 ರಷ್ಟಿತ್ತು. ಆದರೆ ಏ.12 ಅಂದರೆ 91 ಕ್ಷೇತ್ರಗಳಿಗೆ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದ ಬಳಿಕ ಶೇ.43.25 ಕ್ಕೆ ಕುಸಿದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com