ದೆಹಲಿ: ಆಮ್ ಆದ್ಮಿ ಪಕ್ಷದ ಪರ ಪ್ರಕಾಶ್ ರಾಜ್ ಪ್ರಚಾರ

ಕೋಮು ಮತ್ತು ದ್ವೇಷದ ರಾಜಕೀಯದದಿಂದಾಗಿ ಅಳಿವಿನ ಅಂಚಿನಲ್ಲಿರುವ ದೇಶದ ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು ಜನರು ಒಗ್ಗೂಡಬೇಕಾಗಿದೆ ಎಂದು ಹೇಳಿರುವ ನಟ, ರಾಜಕಾರಣಿ ಪ್ರಕಾಶ್ ರಾಜ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.
ಎಎಪಿ ಪಕ್ಷದ ಮುಖಂಡ ಗೋಪಾಲ್ ರೈ ಹಾಗೂ ಪ್ರಕಾಶ್ ರಾಜ್
ಎಎಪಿ ಪಕ್ಷದ ಮುಖಂಡ ಗೋಪಾಲ್ ರೈ ಹಾಗೂ ಪ್ರಕಾಶ್ ರಾಜ್
Updated on: 

ನವದೆಹಲಿ:  ಕೋಮು ಮತ್ತು ದ್ವೇಷದ ರಾಜಕೀಯದದಿಂದಾಗಿ ಅಳಿವಿನ  ಅಂಚಿನಲ್ಲಿರುವ ದೇಶದ  ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು  ಜನರು ಒಗ್ಗೂಡಬೇಕಾಗಿದೆ ಎಂದು ಹೇಳಿರುವ ನಟ, ರಾಜಕಾರಣಿ ಪ್ರಕಾಶ್ ರಾಜ್  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ದೆಹಲಿಯಲ್ಲಿ ಒಂದು ವಾರಗಳ ಕಾಲ ಆಮ್ ಆದ್ಮಿ ಪಕ್ಷದ ಪರವಾಗಿ ಪ್ರಚಾರ ನಡೆಸುವುದಾಗಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಪ್ರಕಾಶ್ ರಾಜ್ ತಿಳಿಸಿದರು. 
ಆರೋಗ್ಯ, ಶಿಕ್ಷಣ , ಅದಕ್ಕಾಗಿ ಮಾಡಿರುವ ಕೆಲಸಗಳ  ವಿಚಾರವನ್ನಿಟ್ಟುಕೊಂಡು ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಹೋರಾಟ ಮಾಡುತ್ತಿದೆ. ವಿವಿಧ ವ್ಯಕ್ತಿಗಳು ವಿಭಿನ್ನವಾಗಿ ಆಲೋಚಿಸುತ್ತಾರೆ.  ಆದರೆ, ದೇಶದ ಮೇಲಿನ ಪ್ರೀತಿಗಾಗಿ ಎಲ್ಲರೂ ಒಗ್ಗೂಡಬೇಕಾಗಿದೆ. ಇದರಿಂದಾಗಿ ಕೋಮು ಮತ್ತು ದ್ವೇಷದ ರಾಜಕೀಯದದಿಂದಾಗಿ ಅಳಿವಿನ  ಅಂಚಿನಲ್ಲಿರುವ ದೇಶದ  ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು  ಸಾಧ್ಯವಾಗಲಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com