ನವದೆಹಲಿ: ಬಿಜೆಪಿ ಎಂದಿಗೂ ಮೋದಿ ಅಥವಾ ಅಮಿತ್ ಶಾ ಅವರ ಪಕ್ಷವಾಗುವುದಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬಿಜೆಪಿ ಪಕ್ಷ ಮೋದಿ ಕೇಂದ್ರಿತವಾಗುತ್ತಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿರುವ ನಿತಿನ್ ಗಡ್ಕರಿ, ಬಿಜೆಪಿ ಸಿದ್ಧಾಂತ ಕೇಂದ್ರಿತ ಪಕ್ಷವೇ ಹೊರತು ವ್ಯಕ್ತಿ ಕೇಂದ್ರಿತ ಪಕ್ಷವಾಗುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಈ ಹಿಂದೆ ಅಟಲ್ ಅಥವಾ ಅಡ್ವಾನಿ ಅವರ ಪಕ್ಷ ಆಗಿರಲಿಲ್ಲ, ಇನ್ನು ಮುಂದೆ ಮೋದಿ-ಅಮಿತ್ ಶಾ ಪಕ್ಷವೂ ಆಗಲ್ಲ. ಬಿಜೆಪಿ ಎಂದಿಗೂ ಸಿದ್ಧಾಂತ ಕೇಂದ್ರಿತ ಪಕ್ಷ ಎಂದು ಗಡ್ಕರಿ ಹೇಳಿದ್ದಾರೆ.
ಇದೇ ವೇಳೆ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಅತಂತ್ರವಾಗಿರಲಿದೆ ಎಂಬ ವರದಿಗಳನ್ನು ಅಲ್ಲಗಳೆದಿರುವ ನಿತಿನ್ ಗಡ್ಕರಿ, ಕಳೆದ ಬಾರಿಗಿಂತ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.