ಬಿಜೆಪಿ, ಆರ್ ಎಸ್ಎಸ್ ಮತ್ತು ಮೋದಿ ನನ್ನ ಕುಟುಂಬದ ಬಗ್ಗೆ ದ್ವೇಷ ಕಾರುತ್ತಾರೆ: ರಾಹುಲ್ ಗಾಂಧಿ

ಬಿಜೆಪಿ, ಆರ್ ಎಸ್ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಕುಟುಂಬದ ಬಗ್ಗೆ ದ್ವೇಷ ಕಾರುತ್ತಾರೆ. ಆದರೂ ನಾನು ಅವರನ್ನು ಅಪ್ಪಿಕೊಳ್ಳುತ್ತೇನೆ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ಶುಜಾಲಪುರ್: ಬಿಜೆಪಿ, ಆರ್ ಎಸ್ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಕುಟುಂಬದ ಬಗ್ಗೆ ದ್ವೇಷ ಕಾರುತ್ತಾರೆ. ಆದರೂ ನಾನು ಅವರನ್ನು ಅಪ್ಪಿಕೊಳ್ಳುತ್ತೇನೆ. ಏಕೆಂದರೆ ಪ್ರೀತಿಯಿಂದ ಮಾತ್ರ ದ್ವೇಷವನ್ನು ಸೋಲಿಸಲು ಸಾಧ್ಯ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶನಿವಾರ ಹೇಳಿದ್ದಾರೆ.
ಇಂದು ಮಧ್ಯ ಪ್ರದೇಶದ ಶುಜಾಲಪುರ್ ದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ''ಮೋದಿ ಅವರು ನನ್ನ ಬಗ್ಗೆ , ದಿವಂಗತ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅವರ ಬಗ್ಗೆ ದ್ವೇಷದ ಭಾವನೆ ಹರಡಬಹುದು. ಆದರೆ ಅದಕ್ಕೆ ಪ್ರತಿಯಾಗಿ ನಾನು ಪ್ರೀತಿಯಿಂದಲೇ ಉತ್ತರಿಸುತ್ತೇನೆ'' ಎಂದರು.
ನೀವು ಈ ದೇಶದ ಪ್ರಧಾನಿ. ದ್ವೇಷವನ್ನು ಮರೆತು ಪ್ರೀತಿಯಿಂದ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ರಾಹುಲ್ ಸಲಹೆ ನೀಡಿದ್ದಾರೆ.
ಈ ಚುನಾವಣೆ ಕಾಂಗ್ರೆಸ್ ಸಿದ್ಧಾಂತ ಮತ್ತು ಬಿಜೆಪಿ ಹಾಗೂ ಆರ್ ಎಸ್ಎಸ್ ಸಿದ್ದಾಂತಗಳ ನಡುವಿನ ಹೋರಾಟ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com