ಮೋದಿಯಿಂದ ಸುಮಲತಾ ಹೆಸರು ಪ್ರಸ್ತಾಪ: ಪಕ್ಷೇತರ ಅಭ್ಯರ್ಥಿಯನ್ನೇ 'ಬಿಜೆಪಿ ಅಭ್ಯರ್ಥಿ' ಎಂದು ಬಿಂಬಿಸುತ್ತಿರುವ ಜೆಡಿಎಸ್

ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ತಮ್ಮ ಮೈಸೂರು ಚುನಾವಣಾ ಪ್ರಚಾರದಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರನ್ನು ಪ್ರಸ್ತಾಪಿಸಿರುವುದು ಎಲ್ಲ ಪಕ್ಷದ ನಾಯಕರಿಗೂ ಅಚ್ಚರಿ ತಂದಿತ್ತು.
ಸುಮಲತಾ ಅಂಬರೀಶ್
ಸುಮಲತಾ ಅಂಬರೀಶ್
Updated on: 
ಮೈಸೂರು: ಪ್ರಧಾನಿ  ನರೇಂದ್ರ ಮೋದಿ ಇತ್ತೀಚಿನ ತಮ್ಮ ಮೈಸೂರು ಚುನಾವಣಾ ಪ್ರಚಾರದಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರನ್ನು ಪ್ರಸ್ತಾಪಿಸಿರುವುದು ಎಲ್ಲ ಪಕ್ಷದ ನಾಯಕರಿಗೂ ಅಚ್ಚರಿ ತಂದಿತ್ತು. ಈಗ ಇದೇ ನಡೆ ಸುಮಲತಾ ಅವರಿಗೆ ಚುನಾವಣೆಯಲ್ಲಿ ಹಿನ್ನಡೆಗೂ ಕಾರಣವಾಗಲಿದೆ ಎನ್ನಲಾಗುತ್ತಿದೆ. ಜಾತ್ಯಾತೀತ ಜನತಾದಳ ಮೋದಿಯವರು ಸುಮಲತಾ ಅವರ ಹೆಸರನ್ನು ಪ್ರಸ್ತಾಪಿಸಿದ್ದನ್ನೇ ಮುಂದಿಟ್ಟುಕೊಂಡು ಸುಮಲತಾ ಬಿಜೆಪಿ ಅಭ್ಯರ್ಥಿ ಎಂಬಂತೆ ಬಿಂಬಿಸುತ್ತಿದೆ.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ  ಅವರ ಮೊಮ್ಮಗನಾದ ನಿಖಿಲ್ ಕುಮಾರಸ್ವಾಮಿ  ಅವರನ್ನು ಸಂಸತ್ತಿಗೆ ಚುನಾಯಿಸಲು ಜೆಡಿಎಸ್ ಸತತ ಹೋರಾಟ ನಡೆಸುತ್ತಿದೆ. ಇದಕ್ಕಾಗಿ ಪ್ರತಿಯೊಂದು ಸಂಭಾವ್ಯ ಮತದಾರನ ಮೇಲೆ ಅವರು ಗಮನವಿಟ್ಟಿದ್ದಾರೆ. ಇತ್ತ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿದ್ದೂ ಇನ್ನೂ ಮೂವರು ಅದೇ ಹೆಸರಿನ ಅಭ್ಯರ್ಥಿಗಳ ಜತೆ ಸೆಣೆಸಬೇಕಾಗಿದೆ.
ಅಲ್ಲದೆ ಅಂಬರೀಶ್ ಗೆ ಗೌರವಿಸಿದ ಪ್ರಧಾನಿ ಕುರಿತಂತೆ ಸುಮಲತಾ ಹರ್ಷ ವ್ಯಕ್ತಪಡಿಸಿದ್ದರು. ಕನ್ನಡ ನಾಡಿಗೆ ತಮ್ಮ ಕುಟುಂಬ ನೀಡಿದ ಕೊಡುಗೆಯನ್ನು ಪ್ರಸ್ತಾಪಿಸಿದ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಆದರೆ ಅಲ್ಪಸಂಖ್ಯಾತರ ಕಾರಣಕ್ಕಾಗಿ ಮೋದಿ ಹೆಸರನ್ನು ಪ್ರಚಾರದ ವೇಳೆ ದೂರವಿಟ್ಟಿದ್ದಾರೆ.. ಎಲ್ಲಾ ಪಕ್ಷಗಳಿಂಡ ಸಮಾನ ಅಂತರ ಕಾಯ್ದುಕೊಂಡಿದ್ದ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಮುಸ್ಲಿಮರು, ಮೀನುಗಾರರು, ದಲಿತರು, ಕುರುಬರು ಎಲ್ಲರ ಬಗೆಗೆ ಸಮಾನ ಒಲವನ್ನು ಹೊಂದಿದ್ದಾರೆ. ಅಲ್ಲದೆ ಚುನಾವನೆ ನಾಮಪತ್ರ ಸಲ್ಲಿಕೆಗೆ ಹೋಗುವ ವೇಳೆ ತಾನೆಂದೂ ಬಿಜೆಪಿ ಸೇರಲ್ಲ ಎಂದೂ ಸ್ಪಷ್ಟವಾಗಿ ಹೇಳಿದ್ದರು.
ಆದರೆ ಇದರ ವಿರುದ್ಧ್ಗವಾಗಿ ಹೇಳುತ್ತಿರುವ ಜೆಡಿಎಸ್ . ಮೋದಿ ವಿರೋಧಿ ಮತ್ತು ಬಿಜೆಪಿವಿರೋಧಿಗಳಾದ ಮುಸ್ಲಿಮರು, ದಲಿತರು,ಮ್ತ್ತು ಇತರ ಹಿಂದುಳಿದ ಜಾತಿಗಳ ಮತಗಳನ್ನು ಪಡೆಯಲು ಹೆಚ್ಚು ಪ್ರಯತ್ನದಲ್ಲಿರುವ ಜೆಡಿಎಸ್ ಸುಮಲತಾ ಸ್ಪರ್ಧೆಯಿಂದ ಅಪಾಯಕ್ಕೆ ಸಿಲುಕಿದೆ. ಅದಕ್ಕಾಗಿ ಅವರ ಮೇಲೆ ನಿರಂತರ ಯಾವುದಾದರೂ ಆರೀಓಪ ಹೊರಿಸುತ್ತಾ ಸುಮಲತಾ ಅವರ ವಿರುದ್ಧ ಜನಾಭಿಪ್ರಾಯ ಬಲಗೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.ಮುಖ್ಯಮಂತ್ರಿ, ಮೂವರು ಕ್ಯಾಬಿನೆಟ್ ಮಂತ್ರಿಗಳು ಮತ್ತು ಎಂಟು ಶಾಸಕರು ಸೇರಿದಂತೆ  12  ಮಂದಿ ಈ ಪ್ರತಿಷ್ಠಿತ ಚುನಾವಣೆಯಲ್ಲಿ ಹೇಗಾದರೂ ಜೆಡಿಎಸ್ ನಿಖಿಲ್ ಅವರನ್ನು ಗೆಲ್ಲಿಸಬೆಕೆಂದು ಹೋರಾಟಕ್ಕಿಳಿದಿದ್ದಾರೆ. ಇದಕ್ಕಾಗಿ ಸುಮಲತಾ "ಈ ಎಲ್ಲವೂ ಜೆಡಿಎಸ್ ನ ಹತಾಶ ತಂತ್ರಗಳು" ಎಂದು ಪ್ರತಿಕ್ರಯಿಸಿದ್ದಾರೆ.ಕುಮಾರಸ್ವಾಮಿ ಮತ್ತು ಅವರ ಪಕ್ಷಕ್ಕೆ ಮಂಡ್ಯ ಚುನಾವಣೆಗಳು ನಿರ್ಣಾಯಕವೆಂದು ತಿಳಿದುಕೊಂಡು ಜೆಡಿಎಸ್ಅಲ್ಪಸಂಖ್ಯಾತ ಮತಗಳನ್ನು ಏಕೀಕರಿಸುವ ಕೆಲವು ಕೊನೆಯ ನಿಮಿಷದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಅಂಬರೀಶ್ ಅಭಿಮಾನಿಗಳ ಸಾಂಘದ ಅಧ್ಯಕ್ಷ ಸೋಮಶೇಖರ್ ಜೆಡಿಎಸ್ ನ ಈ ಪ್ರಚಾರ ಸುಮಲತಾ ಭವಿಷ್ಯದ ಮೇಲೆ ಯಾವ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ. . "ನಾವು ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಪ್ರಚಾರವನ್ನು ಪೂರ್ಣಗೊಳಿಸಿದ್ದೇವೆ ಮತ್ತು ಕೆ ಆರ್ ಪೇಟೆಗೆ ತೆರಳಿದ್ದೇವೆ ಮಂಡ್ಯ ಜನರು ಮತದಾನ ಮೂಲಕ ಈ ಅಗ್ಗದ ರಾಜಕೀಯಕ್ಕೆ ಸರಿಯಾದ ಉತ್ತರವನ್ನು ನೀಡುತ್ತಾರೆ ಎಂದು ಅವರು ಹೇಳಿದರು.
ಟಿಪ್ಪು ಸಮಾಧಿಗೆ ಭೇಟಿ
ಸುಮಲತಾ ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ ಸಮಾಧಿಗೆ ಭೇಟಿ ಕೊಟ್ಟಿದ್ದಾರೆ. ಗುರುವಾರ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನನ ಸಮಾಧಿಗೆ ಭೇಟಿ ನೀಡಿದ ಸುಮಲತಾ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು ಮತ್ತು ಉರ್ದು ಭಾಷೆಯಲ್ಲಿ ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದರು, ತಮಗೆ ಮತ ನೀಡಿದರೆ ನಾವೆಂದೂ ಬಿಜೆಪಿ ಸೇರುವುದಿಲ್ಲ,  "ನಾನು ಸ್ವತಂತ್ರವಾಗಿ ಸ್ಪರ್ಧಿಸಿದ್ದೇನೆ, ಏಕೆಂದರೆ ಕಾಂಗ್ರೆಸ್ ನನಗೆ ಟಿಕೆಟ್ ನಿರಾಕರಿಸಿತು. ನಾನು ಬಿಜೆಪಿಗೆ ಸೇರಲು ಉತ್ಸುಕವಾಗಿದ್ದಿದ್ದರೆ ನಾನು ಬಿಜೆಪಿ ಟಿಕೆಟ್ ಪಡೆದುಕೊಳ್ಳುತ್ತಿದ್ದೆ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com