ತೇಜಸ್ವಿ ವಿರುದ್ಧ ಆರೋಪ: ಕೈ ವಕ್ತಾರ ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತ ಕಿಡಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಆಡಿಯೋ ರಿಲೀಸ್ ಮಾಡಿದ್ದ ಕಾಂಗ್ರೆಸ್ ನಾಯಕ, ವಕ್ತಾರ ಬ್ರಜೇಶ್ ಕಾಳಪ್ಪ ವಿರುದ್ಧ ತೇಜಸ್ವಿ ಗೆಳತಿ ಡಾ. ಸೋಮ್ ದತ್ತಾ ಕಿಡಿ
ತೇಜಸ್ವಿ ವಿರುದ್ಧ ಆರೋಪ: ಕೈ ವಕ್ತಾರ ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತ ಕಿಡಿ
ತೇಜಸ್ವಿ ವಿರುದ್ಧ ಆರೋಪ: ಕೈ ವಕ್ತಾರ ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತ ಕಿಡಿ
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಆಡಿಯೋ ರಿಲೀಸ್ ಮಾಡಿದ್ದ ಕಾಂಗ್ರೆಸ್ ನಾಯಕ, ವಕ್ತಾರ ಬ್ರಜೇಶ್ ಕಾಳಪ್ಪ ವಿರುದ್ಧ ತೇಜಸ್ವಿ ಗೆಳತಿ ಡಾ. ಸೋಮ್ ದತ್ತಾ ಕಿಡಿ ಕಾರಿದ್ದಾರೆ. 
"ರಾಜಕೀಯ ಲಾಭಕ್ಕಾಗಿ ಮಹಿಳೆಯರ ಗೌರವ, ಘನತೆಗೆ ಧಕ್ಕೆ ತರುತ್ತಿರುವ ಬ್ರಿಜೇಶ್ ಕಾಳಪ್ಪಾಗೆ  ನಾಚಿಕೆಯಾಗಬೇಕು ಎಂದು ಸೋಮ್ ದತ್ತಾ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ  ನನ್ನ ಗೌರವ ಹಾಗೂ ಘನತೆಗೆ ಧಕ್ಕೆ ತಂದಿರುವ ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಡಾ. ಸೋಮ್ ದತ್ತಾ ಹೇಳಿದ್ದಾರೆ. 
ಡಾ. ಸೋಮ್ ದತ್ತಾ ತಮ್ಮ ಪರಿಚಿತ ವ್ಯಕ್ತಿ ಜೊತೆ 14 ನಿಮಿಷಗಳ ಕಾಲ ಮಾತನಾಡಿರುವ ಆಡಿಯೋ ಕ್ಲಿಪ್ ನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ "ತೇಜಸ್ವಿ ಸೂರ್ಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತೇಜಸ್ವಿ ಸೂರ್ಯ ತಮ್ಮ ಅಫಿಡವಿಟ್ ನಲ್ಲಿ ಪ್ರಕರಣ ಬಗ್ಗೆ ಹೇಳಿಕೊಂಡಿಲ್ಲ. ಈ ಎಲ್ಲ ವಿಚಾರಗಳು ಸಂಸದ ಪ್ರತಾಪ್ ಸಿಂಹಗೆ ಗೊತ್ತಿದ್ದರೂ ಜವಾಬ್ದಾರಿಯುತ ಸಂಸದನಾಗಿ ಸುಮ್ಮನಿದ್ದಾರೆ. ಸೋಮ್ ದತ್ತಾಗೆ ಬಿಜೆಪಿ ನಾಯಕರು ಕರೆ ಮಾಡಿ ಧಮ್ಕಿ ಹಾಕಿದ್ದು, ಹೀಗಾಗಿ ಮಾಧ್ಯಮಗಳ ಮುಂದೆ ಬರಲು ಸಾಧ್ಯ ಆಗುತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com