ರಾಹುಲ್ ಗಾಂಧಿ ಮತ್ತು ಕುಮಾರಸ್ವಾಮಿ ಜೋಕರ್ ಗಳು: ಬಸವರಾಜ ಬೊಮ್ಮಾಯಿ

ಮತದಾರರು ಯಾರು ಹೀರೋ ಮತ್ತು ಯಾರು ಜೋಕರ್ ಎಂದು ನಿರ್ಧರಿಸುತ್ತಾರೆ ಎಂದು ಪ್ರಧಾನಿ ...
ಬಸವರಾಜ್ ಬೊಮ್ಮಾಯಿ
ಬಸವರಾಜ್ ಬೊಮ್ಮಾಯಿ
Updated on: 
ಹುಬ್ಬಳ್ಳಿ: ಮತದಾರರು ಯಾರು ಹೀರೋ ಮತ್ತು ಯಾರು ಜೋಕರ್ ಎಂದು ನಿರ್ಧರಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಹೀರೋ ಎಂದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಜೋಕರ್ ಎಂದು ಉಲ್ಲೇಖಿಸುವ ಮೂಲಕ ಬಿಜೆಪಿ ಶಾಸಕ ಬಸವರಾಜ್ ಬೊಮ್ಮಾಯಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಕುಮಾರಸ್ವಾಮಿಯನ್ನು ಏಕೆ ಈ ರೀತಿ ಹೇಳುತ್ತೀರಿ ಎಂದು ಕೇಳಿದ್ದಕ್ಕೆ, ಈ ಇಬ್ಬರೂ ನಾಯಕರು ತಮ್ಮ ಮಾತುಗಳಿಂದ, ದೈಹಿಕ ಭಾಷೆ ಮತ್ತು ಯೋಚನಾ ವಿಧಾನದಿಂದ ತಾವು ಜೋಕರ್ ಗಳೆಂದು ಜನರ ಮುಂದೆ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಜನರು ಯಾರು ಹೀರೋ, ಯಾರು ಜೋಕರ್ ಎಂದು ನಿರ್ಧರಿಸುತ್ತಾರೆ ಎಂದರು.
ಬ್ರಿಟಿಷರ ವಿಭಜನೆ ಮಾಡಿ ಆಳುವ ನೀತಿಯನ್ನು ಕಾಂಗ್ರೆಸ್ ಪಕ್ಷ ಅನುಸರಿಸುತ್ತಿದೆ. ಇದಕ್ಕಾಗಿ ಲಿಂಗಾಯತ ವಿಚಾರವನ್ನು ಎಳೆದುತರುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com