ತೇಜಸ್ವಿನಿಗೆ ತಪ್ಪಿದ ಟಿಕೆಟ್: ಆರ್. ಅಶೋಕ್ ಮನವೊಲಿಕೆಗೆ ಮುಂದಾದ ಯಡಿಯೂರಪ್ಪ!

ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ...
ತೇಜಸ್ವಿನಿಗೆ ತಪ್ಪಿದ ಟಿಕೆಟ್: ಆರ್. ಅಶೋಕ್ ಮನವೊಲಿಕೆಗೆ ಮುಂದಾದ ಯಡಿಯೂರಪ್ಪ
ತೇಜಸ್ವಿನಿಗೆ ತಪ್ಪಿದ ಟಿಕೆಟ್: ಆರ್. ಅಶೋಕ್ ಮನವೊಲಿಕೆಗೆ ಮುಂದಾದ ಯಡಿಯೂರಪ್ಪ
Updated on: 
ಬೆಂಗಳೂರು: ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ, 
ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಿರುವುದು ಮಾಜಿ ಡಿಸಿಎಂ ಆರ್. ಅಶೋಕ ಅವರಿಗೆ ಬೇಸರ ತರಿಸಿದೆ, ಯಡಿಯೂರಪ್ಪ ಅವರು ಖಾಸಗಿಯಾಗಿ ಮನೆಗೆ ಕರೆಸಿಕೊಂಡು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ, 
ತೇಜಸ್ವಿ ಸೂರ್ಯ ಅವರ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ,ಅಸಮಾಧಾನಕ್ಕಿಂತ ಮೋದಿ ಅಲೆ ಮುಖ್ಯವಾಗಿದೆ, ತೇಜಸ್ವಿ ಸೂರ್ಯ ಪರವಾಗಿ ತೇಜಸ್ವಿನಿ ಪ್ರಚಾರ ಮಾಡುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 
ಯಡಿಯೂರಪ್ಪ ಅವರ ಮನವೊಲಿಕೆಗೆ ಕರಗಿರುವ ಅಶೋಕ್ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸ್ಥಳೀಯ ನಾಯಕರ ಸಭೆ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com