ಇಡೀ ಪಂದ್ಯದಲ್ಲಿ ಆಸ್ಟ್ರೇಲಿಯೋ ಸೋತಿತಾದರೂ, ಪ್ರಬಲ ಪ್ರಾನ್ಸ್ ತೀವ್ರ ಪೈಪೋಟಿ ನೀಡುವ ಮೂಲಕ ಗಮನ ಸೆಳೆಯಿತು. ಪ್ರಮುಖವಾಗಿ ಪಂದ್ಯದ ಆರಂಭದಿಂದಲೇ ಬಲಿಷ್ಠ ರಕ್ಷಣಾ ಗೋಡೆ ನಿರ್ಮಿಸಿದ ಆಸ್ಟ್ರೇಲಿಯಾ ತಂಡ ಎದುರಾಳಿಗಳನ್ನು ದಂಗು ಬಡಿಸಿತು. ಗೋಲು ಗಳಿಸಲು ನಡೆಸಿದ ಪ್ರಯತ್ನಗಳು ನಿರಂತರ ವಿಫಲಗೊಂಡಾಗ ಫ್ರಾನ್ಸ್ ಆಟಗಾರರು ಒತ್ತಡಕ್ಕೆ ಒಳಗಾದರು. ಗಾಯದ ಮೇಲೆ ಬರೆ ಎಳೆದಂತೆ ಒಲಿವಿಯರ್ ಗಿರೌಡ್ ತಲೆಗೆ ಪೆಟ್ಟು ಬಿತ್ತು. ಅದರಿಂದಾಗಿ ಅವರು ವಿಶ್ರಾಂತಿಗೆ ತೆರಳಿದರು.