ಫಿಫಾ ವಿಶ್ವಕಪ್ 2014

ಹೊಸ ಕನಸಲ್ಲಿ ಸ್ಪೇನ್, ಸೇಡಿಗೆ ಹಾಲೆಂಡ್ ತವಕ

ಹೊಸ ಕನಸಲ್ಲಿ ಸ್ಪೇನ್, ಸೇಡಿಗೆ ಹಾಲೆಂಡ್ ತವಕ
Published On :

ಸಾಲ್ವಾಡೊರ್ (ಬ್ರೆಜಿಲ್): ಹಾಲಿ ಚಾಂಪಿಯನ್ ಹೆಗ್ಗಳಿಕೆ ಹೊಂದಿರುವ ಸ್ಪೇನ್ ತಂಡದ ಆಟಗಾರರು ಶುಕ್ರವಾರ ನಡೆಯಲಿರುವ “¸’ ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಪ್ರಬಲ ಹಾಲೆಂಡ್ ತಂಡವನ್ನು ಎದುರಿಸುವ ಮೂಲಕ ಈ ಬಾರಿಯ ಫಿಫಾ ವಿಶ್ವಕಪ್ನಲ್ಲಿ ತಮ್ಮ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಳೆದ 2010ರ ವಿಶ್ವಕಪ್ ಫೈನಲ್ನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆಗ ಏಕೈಕ ಗೋಲಿನಿಂದ ಹಾಲೆಂಡ್ ತಂಡವನ್ನು ಮಣಿಸಿ ಮೊದಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಹೆಚ್ಚುವರಿ ಸಮಯದ ಆಟದಲ್ಲಿ (ಪಂದ್ಯದ 116ನೇ ನಿಮಿಷ) ಆ್ಯಂಡ್ರೇಸ್ ಇನಿಯೆಸ್ಟಾ ಆಕರ್ಷಕ ಗೋಲು ಬಾರಿಸಿ ಸ್ಪೇನ್ ತಂಡಕ್ಕೆ ಚಾಂಪಿಯನ್ಪಟ್ಟ ದಕ್ಕಿಸಿಕೊಟ್ಟಿದ್ದರು.
ಈ ಬಾರಿ ಹಾಲಿ ಚಾಂಪಿಯನ್ ಹಣೆಪಟ್ಟಿ ಅಂಟಿಸಿಕೊಂಡಿರುವ ಸ್ಪೇನ್, ಮತ್ತೆ ಅದೇ ಫಲಿತಾಂಶ ಕಾಣುವ ಮೂಲಕ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡುವ ಕನಸು ಕಟ್ಟಿಕೊಂಡಿದೆ.
ಮತ್ತೊಂದೆಡೆ ಕಳೆದ ಬಾರಿಯ ಫೈನಲ್ನಲ್ಲಿ ಸೋತು ಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಳ್ಳುವ ಅವಕಾಶವನ್ನು ಕೈಚೆಲ್ಲಿದ್ದ ಹಾಲೆಂಡ್ ಆಟಗಾರರು ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ನಾಯಕ ರಾಬಿನ್ ವ್ಯಾನ್ ಪರ್ಸಿ, ಆರ್ಜೆನ್ ರೂಬೆನ್, ವೆಸ್ಲೆ ಸ್ನೈಡರ್, ನಿಗೆಲ್ ಡಿ ಜಾಂಗ್ ಮತ್ತು ಡರ್ಕ್ ಕುಯ್ಟ್ ಈ ನಾಲ್ವರು ಆಟಗಾರರು ಕಳೆದ ವಿಶ್ವಕಪ್ ತಂಡದಲ್ಲಿ ಆಡಿದ ಅನುಭವಿಗಳಾಗಿದ್ದು, ಇವರ ಮೇಲೆ ಈ ಬಾರಿ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.  
ಅದರಲ್ಲೂ 100ನೇ ಪಂದ್ಯವಾಡಲಿರುವ ಹಿರಿಯ ಸಂಪರ್ಕ ಆಟಗಾರ ವೆಸ್ಲೆ ಸ್ನೈಡರ್ ಹೆಚ್ಚು ಭರವಸೆದಾಯಕ ಆಟಗಾರರಾಗಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲಿಯೇ ಹಿಂದಿನ ಆವೃತ್ತಿಯಲ್ಲಿ ಫೈನಲ್ ತಲುಪಿದ್ದ ಎರಡು ತಂಡಗಳೇ ಮುಂದಿನ ಟೂರ್ನಿಯಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲ ಬಾರಿಗೆ ಎಂಬುದು ಮತ್ತೊಂದು ವಿಶೇಷ.



ಸ್ಪೇನ್ ತಂಡದ ಶಕ್ತಿ
ಗೋಲ್ಕೀಪರ್- ಐಕರ್ ಕ್ಯಾಸಿಲಾಸ್,
ರಕ್ಷಣೆ- ಸೆರ್ಗಿಯೊ ರಾಮೋಸ್, ಜಾವಿ ಮಾರ್ಟಿನೆಜ್, ಗೆರಾರ್ಡ್ ಪಿಕ್
ಸಂಪರ್ಕ- ಆ್ಯಂಡ್ರೇಸ್ ಇನಿಯೆಸ್ಟಾ, ಜಾವಿ, ಜಾಬಿ ಅಲೊನ್ಸೊ, ಸೆಸ್ ಫಾಬ್ರಿಗಾಸ್, ಡೇವಿಡ್ ಸಿಲ್ವಾ
ಮುನ್ಪಡೆ- ಡೇವಿಡ್ ವಿಲ್ಲಾ, ಫರ್ನಾಂಡೊ ಟೊರೆಸ್, ಡೀಗೊ ಕೋಸ್ಟಾ, ಪೆಡ್ರೊ
ಕೋಚ್-ವಿಸೆಂಟ್ ಡೆಲ್ ಬಾಸ್ಕ್
ಹಾಲೆಂಡ್ ತಂಡದ ಶಕ್ತಿ
ಗೋಲ್ಕೀಪರ್-ಜಾಸ್ಪರ್ ಸಿಲ್ಲೆಸ್ಸೆನ್
ರಕ್ಷಣೆ- ಡ್ಯಾಲೆ ಬ್ಲೈಂಡ್, ಜೊಯೆಲ್ ವೆಲ್ಟ್ಮಾನ್, ಡಾರಿಲ್ ಜನ್ಮಾಟ್, ಟೆರೆನ್ಸ್ ಕೊಂಗೊಲೊ
ಸಂಪರ್ಕ- ವೆಸ್ಲೆ ಸ್ನೈಡರ್, ನಿಗೆಲ್ ಡಿ ಜಾಂಗ್, ಜಾರ್ಡಿ ಕ್ಲಾಸೀ, ಜೊನಾಥನ್ ಡಿ ಗುಜ್ಮಾನ್
ಮುನ್ಪಡೆ- ರಾಬಿನ್ ವ್ಯಾನ್ ಪರ್ಸಿ, ಆರ್ಜೆನ್ ರೂಬೆನ್, ಜೆರೆಮೇನ್ ಲೆನ್ಸ್, ಡರ್ಕ್ ಕುಯ್ಟ್, ಮೆಫಿಸ್ ಡೆಪೈ
ಕೋಚ್-ಲೂಯಿಸ್ ವ್ಯಾನ್ ಗಾಲ್
ಈವರೆಗಿನ ಮುಖಾಮುಖಿ

ತಂಡ    ಪಂದ್ಯ    ಜಯ    ಡ್ರಾ    ಸೋಲು    ಗೋಲುಪರ    ಗೋಲುವಿರುದ್ಧ
ಸ್ಪೇನ್    10    5    1    4    16    11
ಹಾಲೆಂಡ್    10    4    1    5    11    16



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.