ಫಿಫಾ ವಿಶ್ವಕಪ್ 2014

ಶುಭಾರಂಭದ ನಿರೀಕ್ಷೆಯಲ್ಲಿ ಮೆಕ್ಸಿಕೊ-ಕೆಮರೂನ್

ಶುಭಾರಂಭದ ನಿರೀಕ್ಷೆಯಲ್ಲಿ ಮೆಕ್ಸಿಕೊ-ಕೆಮರೂನ್
Published On :

ನಟಾಲ್: ಚುರುಕಿನ ಪಾದದ ಚಲನ ಹೊಂದಿರುವ ಮೆಕ್ಸಿಕೊ ತಂಡದ ಆಟಗಾರರು ಫಿಫಾ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಕೆಮರೂನ್ ತಂಡವನ್ನು ಎದುರಿಸುವ ಮೂಲಕ 'ಎ' ಗುಂಪಿನಲ್ಲಿ ತಮ್ಮ ಹೋರಾಟಕ್ಕೆ ಮುನ್ನುಡಿ ಬರೆಯಲಿದ್ದಾರೆ.
ಮಿಗ್ಯುಲ್ ಹೆರೇರಾ ಗರಡಿಯಲ್ಲಿ ಪಳಗಿರುವ ಮೆಕ್ಸಿಕೊ ಪಡೆ ಈ ಬಾರಿ ಉತ್ತಮ ಪ್ರದರ್ಶನ ನೀಡುವ ತುಡಿತದಲ್ಲಿದೆ. ಫೋಟೋಗ್ರಾಫರ್ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಅಮೆರಿಕದಲ್ಲಿ 1994ರ ಪಂದ್ಯಾವಳಿಯಲ್ಲಿ ಮೆಕ್ಸಿಕೊ ಪರ ಆಡಲು ಮಿಗ್ಯುಲ್ಗೆ ನಿರಾಕರಿಸಲಾಗಿತ್ತು. ಈಗ ಅವರದ್ದೇ ತರಬೇತಿಯಲ್ಲಿ ಮೆಕ್ಸಿಕೊ ತಂಡ ಅಕಾಡಕ್ಕಿಳಿದಿದೆ.
1970 ಮತ್ತು 86ರ ವಿಶ್ವಕಪ್ಗಳಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದು, ಮೆಕ್ಸಿಕೊದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಈ ಬಾರಿ ಅದಕ್ಕಿಂತಲೂ ಉತ್ತಮ ಸಾಧನೆ ಮಾಡುವ ವಿಶ್ವಾಸ ಹೊಂದಿರುವ ಮೆಕ್ಸಿಕೊ ಆಟಗಾರರು ಕೆಮರೂನ್ ವಿರುದ್ಧ ಗೆದ್ದು ಶುಭಾರಂಭ ಮಾಡುವುದಾಗಿ ಪಣತೊಟ್ಟಿದ್ದಾರೆ.
ಮೆಕ್ಸಿಕೊ ತಂಡಕ್ಕೆ ಇದು ಒಟ್ಟಾರೆ 50ನೇ ವಿಶ್ವಕಪ್ ಪಂದ್ಯವಾಗಿರುವುದು ವಿಶೇಷ. ಈ ಪೈಕಿ ಮೆಕ್ಸಿಕೊ ತಂಡ 12ರಲ್ಲಿ ಗೆಲವು, 13ರಲ್ಲಿ ಡ್ರಾ ಮತ್ತು 24ರಲ್ಲಿ ಸೋಲಿನ ಕಹಿ ಅನುಭವಿಸಿದೆ. ಅಚ್ಚರಿ ಎಂದರೆ, 1930ರ ಜುಲೈ 13ರಂದು ನಡೆದ ಉದ್ಘಾಟನೆಯ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಸಹ ಸೆಣಸಿದ್ದ ಮೆಕ್ಸಿಕೊ, ಫ್ರಾನ್ಸ್ ವಿರುದ್ಧ 1-4 ಗೋಲುಗಳಿಂದ ಸೋಲನುಭವಿಸಿತ್ತು.
ದಕ್ಷಿಣ ಅಮೆರಿಕದ ಮಣ್ಣಿನಲ್ಲಿ ನಡೆದ ವಿಶ್ವಕಪ್ ಪಂದ್ಯಗಳಲ್ಲಿ ಉತ್ತರ ಅಮೆರಿಕದ ಮೆಕ್ಸಿಕೊ ತಂಡ 11ರಲ್ಲಿ ಸೋಲನುಭವಿಸಿದ್ದು, ಕೇವಲ 1ರಲ್ಲಿ ಗೆಲವು ದಾಖಲಿಸಿದೆ. 1962ರಲ್ಲಿ ಜೊಕೊಸ್ಲೊವಾಕಿಯಾ ವಿರುದ್ಧ 3-1 ಗೋಲುಗಳಿಂದ ಜಯಗಳಿಸಿದ್ದ ಮೆಕ್ಸಿಕೊ ಪಾಲಿಗೆ ಇದು ಚೊಚ್ಚಲ ಗೆಲವು ಕೂಡ ಆಗಿತ್ತು.
ಇನ್ನು ಎದುರಾಳಿ ಕೆಮರೂನ್ ತಂಡವನ್ನು ಹಗುರವಾಗಿ ಕಾಣಲು ಸಾಧ್ಯವಿಲ್ಲ. 1990ರ ಟೂರ್ನಿಯಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದ ಕೆಮರೂನ್, ವಿಶ್ವಕಪ್ನಲ್ಲಿ ಹೇಳಿಕೊಳ್ಳುವಷ್ಟು ಗಮನ ಸೆಳೆಯುವ ಸಾಧನೆಯನ್ನೇನೂ ಮಾಡಿಲ್ಲ. ಆದರೂ, ಅಚ್ಚರಿ ಫಲಿತಾಂಶ ನೀಡುವ ಸಾಮರ್ಥ್ಯ ಕೆಮರೂನ್ ಪಡೆಗಿದೆ.
ಆದರೆ, ಸತತ ನಾಲ್ಕು ವಿಶ್ವಕಪ್ ಪಂದ್ಯಗಳಲ್ಲಿ ಸೋಲುಂಡಿರುವ ಕೆಮರೂನ್ ತಂಡ ಈ ಹಿಂದೆ ಗೆಲವು ದಾಖಲಿಸಿದ್ದು 2002ರಲ್ಲಿ ನಡೆದ ಪಂದ್ಯದಲ್ಲಿ ಸೌದಿ ಅರೆಬಿಯಾ ವಿರುದ್ಧ.



ಕೆಮರೂನ್ ತಂಡದ ಆಕರ್ಷಕರು
ಗೋಲ್ಕೀಪರ್- ಚಾರ್ಲ್ಸ್ ಇಟಾಂಜೆ
ರಕ್ಷಣೆ-ಅಲ್ಲಾನ್ ನ್ಯೂಮ್, ಸೆಡ್ರಿಕ್ ಜೆಯುಗೌ, ಹೆನ್ರಿ ಬೆಡಿಮೊ, ನಿಕೋಲಸ್ ಕೌಲುವು, ಡ್ಯಾನಿ ನೌಂಕೆಯು
ಸಂಪರ್ಕ-ಜೀನ್ ಮಾಕೌನ್, ಸ್ಟಿಫಾನೆ ಮಾಬಿಯಾ, ಅಲೆಕ್ಸ್ ಸಾಂಗ್, ಇಯಾಂಗ್ ಇನೋ
ಮುನ್ಪಡೆ-ಸ್ಯಾಮುಯೆಲ್ ಎಟೂ, ಎರಿಕ್ ಚೌಪೊ ಮಾಟಿಂಗ್, ಬೆಂಜಾಮಿನ್ ಮೌಕಾಂಜೊ, ವಿನ್ಸೆಂಟ್ ಅಬೂಬಕರ್, ಫಾಬ್ರಿಸ್ ಓಲಿಂಗಾ.
ಕೋಚ್-ವೋಲ್ಕರ್ ಫಿಂಕೆ
ಮೆಕ್ಸಿಕೊ ತಂಡದ ಆಕರ್ಷಕರು
ಗೋಲ್ಕೀಪರ್- ಜೋಸ್ ಡಿ ಜೀಸಸ್ ಕೊರೊನಾ, ಗಿಲೆರ್ಮೊ ಓಚೊಯಾ
ರಕ್ಷಣೆ- ಮಿಗ್ಯುಲ್ ಲಾಯುನ್, ಕಾರ್ಲೊಸ್ ಸಾಲ್ಸಿಡೊ, ಆ್ಯಂಡ್ರೀಸ್ ಗಾರ್ಡಾಡೌ, ಫ್ರಾನ್ಸಿಸ್ಕೊ ಜಾವಿಯರ್ ರೋಡ್ರಿಗ್,
ಸಂಪರ್ಕ- ಮಿಗ್ಯುಲ್ ಆ್ಯಂಜೆಲ್ ಪೋನ್ಸ್, ಜೋಸ್ ಜುವಾನ್ ವಾಜ್ಕ್ವಿಡ್, ಜಾವಿಯರ್ ಅಕ್ವಿನೊ, ಇಸಾಕ್ ಬ್ರಿಜುಯೆಲಾ.
ಮುನ್ಪಡೆ- ಜಾವಿಯರ್ ಹೆರ್ನಾಂಡೆಜ್, ಓರಿಬೆ ಪೆರಾಲ್ಟಾ, ಜಿಯೊವಾನಿ ಡಾಸ್ ಸ್ಯಾಂಟೋಸ್, ರಾಲ್ ಜಿಮೆನೆಂಜ್.
ಕೋಚ್- ಮಿಗ್ಯುಲ್ ಹೆರೇರಾ

ಮುಖಾಮುಖಿ

ತಂಡ ಪಂದ್ಯ  ಜಯ  ಡ್ರಾ ಸೋಲು ಗೋಲುಪರ  ಗೋಲುವಿರುದ್ಧ

ಮೆಕ್ಸಿಕೊ   1  1 0  0 1  0
ಕೆಮರೂನ್  1  0 0  1 0 1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.