ಫಿಫಾ ವಿಶ್ವಕಪ್ 2014

ಇಂಗ್ಲೆಂಡ್-ಇಟಲಿ ಮಧ್ಯೆ ಜಿದ್ದಾಜಿದ್ದಿ ನಿರೀಕ್ಷೆ

ಇಂಗ್ಲೆಂಡ್-ಇಟಲಿ ಮಧ್ಯೆ ಜಿದ್ದಾಜಿದ್ದಿ ನಿರೀಕ್ಷೆ
Published On :

ಮಾನೌಸ್: ಇಂಗ್ಲೆಂಡ್ ಮತ್ತು ಇಟಲಿ ತಂಡಗಳ ನಡುವಿನ ಸಮರ ವಿಶ್ವಕಪ್‌ನ ಪ್ರಮುಖ ಪಂದ್ಯಗಳಲ್ಲಿ ಒಂದಾಗಿದೆ. ವಿಶ್ವಕಪ್ ಇತಿಹಾಸದಲ್ಲಿ ಇಟಲಿ 4 ಬಾರಿ (1934, 1938, 1982, 2006) ಪ್ರಶಸ್ತಿ ಗೆದ್ದಿದೆ. ಅತಿ ಹೆಚ್ಚು ಪ್ರಶಸ್ತಿ ಗೆದ್ದಿರುವ ತಂಡಗಳ ಪೈಕಿ ಮೊದ ಸ್ಥಾನದಲ್ಲಿರುವ ಬ್ರೆಜಿಲ್ ನಂತರದ ಸ್ಥಾನದಲ್ಲಿ ಇಟಲಿ ಇದೆ.
ಜಾಗತಿಕ ಫುಟ್ಬಾಲ್ ಇತಿಹಾಸದಲ್ಲಿ ಉಭಯ ತಂಡಗಳು 24 ಬಾರಿ ಎದುರಾಗಿವೆ. ಈ ಪೈಕಿ ಇಟಲಿ 9ರಲ್ಲಿ ಗೆಲವು ಹಾಗೂ ಇಂಗ್ಲೆಂಡ್ 8ರಲ್ಲಿ ಜಯ ದಾಖಲಿಸಿದೆ. 7 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಈ ಅಂಕಿ-ಅಂಶ ಗಮನಿಸಿದರೆ, ಇಟಲಿ ಪಡೆ ಕೊಂಚ ಮೇಲುಗೈ ಸಾಧಿಸಿದ್ದರೂ ಸಹ ಬಹುತೇಕವಾಗಿ ಎರಡೂ ತಂಡಗಳ ಮಧ್ಯೆ ಸಮಬಲದ ಹೋರಾಟವನ್ನೇ ಕಾಣಬಹುದು.
ವಿಶ್ವಕಪ್‌ನಲ್ಲಿ ಮಾತ್ರ ಈ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. 1990ರಲ್ಲಿ ನಡೆದ ಮೂರನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಇಟಲಿ ತಂಡ 2-1 ಗೋಲುಗಳಿಂದ ಇಂಗ್ಲೆಂಡ್ ವಿರುದ್ಧ ಜಯ ಗಳಿಸಿತ್ತು. ಇಟಲಿ ತಂಡ ಕಳೆದ ನಾಲ್ಕು ವಿಶ್ವಕಪ್ ಪಂದ್ಯಗಳಲ್ಲಿ ಗೆಲವು ದಾಖಲಿಸಿಲ್ಲ. ಹಾಗಾಗಿ, ಕೊಂಚ ಒತ್ತಡದಲ್ಲಿದೆ. ಈಗ ದಾಖಲೆಯ ಐದನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಇಟಲಿ ತಂಡ ಮೊದಲ ಅಭಿಯಾನದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.
ಇಟಲಿ ಶಕ್ತಿ
ಮಾರಿಯೊ ಬಲೊಟೆಲಿ, ಜಿಯಾನ್‌ಲ್ಯೂಗಿ ಬಫನ್, ಮಾಟಿಯಾ ಡಿ ಶಿಗ್ಲಿಯೊ, ಆಂಟೊನಿಯೊ ಕಸಾನೊ, ಥಿಯಾಗೊ ಮೊಟ್ಟಾ, ಕ್ಲೌಡಿಯೊ ಮಾರ್ಶಿಸಿಯೊ, ಅಲ್ಬರ್ಟೊ ಅಕ್ವೆಲಾನಿ, ಆ್ಯಂಡ್ರಿಯಾ ಪಿರ್ಲೊ.
ಕೋಚ್- ಸೆಸಾರೆ ಪ್ರಾಂಡೆಲ್ಲಿ
ಇಂಗ್ಲೆಂಡ್ ಶಕ್ತಿ
ವೇಯ್ನ್ ರೂನಿ, ಸ್ಟೀವನ್ ಗೆರಾರ್ಡ್, ಜೋ ಹಾರ್ಟ್, ಗ್ಲೆನ್ ಜಾನ್ಸನ್, ಫ್ರಾಂಕ್ ಲ್ಯಾಂಪರ್ಡ್, ಬೆನ್ ಫೋಸ್ಟರ್, ಡ್ಯಾನಿ ವೆಲ್‌ಬೆಕ್, ಜೋರ್ಡಾನ್, ಹೆಂಡರ್ಸನ್, ರಿಕಿ ಲ್ಯಾಂಬರ್ಟ್, ಫ್ರಾಸರ್ ಫಾರ್ಸ್ಟರ್, ರಹೀಂ ಸ್ಟೆರ್ಲಿಂಗ್.
ಕೋಚ್- ರಾಯ್ ಹಾಜ್‌ಸನ್.

ಪಂದ್ಯ ಆರಂಭ: ನಾಳೆ ಬೆಳಗ್ಗೆ 3.30ಕ್ಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.