ಫಿಫಾ ವಿಶ್ವಕಪ್ 2014

ಇಂಗ್ಲೆಂಡ್-ಉರುಗ್ವೆ ಪಾಲಿಗೆ ಫೈಟ್ ಇಲ್ಲವೇ ಫ್ಲೈಟ್

ಇಂಗ್ಲೆಂಡ್-ಉರುಗ್ವೆ ಪಾಲಿಗೆ ಫೈಟ್ ಇಲ್ಲವೇ ಫ್ಲೈಟ್
Published On :

ಸೌ ಪೌಲೊ: ವಿಶ್ವಕಪ್ ಫುಟ್ಬಾಲ್‌ನ ಎರಡು ಪ್ರಮುಖ ತಂಡಗಳಾದ ಇಂಗ್ಲೆಂಡ್ ಮತ್ತು ಉರುಗ್ವೆ ತಂಡಗಳು ಈ ಬಾರಿ ಗುಂಪು ಸೆಣಸಿನಲ್ಲೀಗ ಅಳಿವು-ಉಳಿವಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿವೆ.
ಏರೆನಾ ಡಿ ಸೌ ಪೊಲೊದಲ್ಲಿ ಗುರುವಾರ ಮಧ್ಯರಾತ್ರಿ ನಡೆಯಲಿರುವ 'ಡಿ' ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಉರುಗ್ವೆ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದವರು ಪ್ರಿಕ್ವಾರ್ಟರ್‌ಫೈನಲ್ ಆಸೆ ಜೀವಂತವಿರಿಸಿಕೊಳ್ಳಲಿದ್ದರೆ, ಸೋತವರು ಗಂಟುಮೂಟೆ ಕಟ್ಟಿದಂತೆಯೇ. ಹಾಗಾಗಿ, ಉಭಯರ ಪಾಲಿಗೆ ಈ ಕದನ ಮಾಡು ಇಲ್ಲವೇ ಮಡಿ ಪರಿಸ್ಥಿತಿಗೆ ಕಾರಣವಾಗಿದೆ. ಅಂತೆಯೇ ಪಂದ್ಯ ಹೆಚ್ಚು ಕುತೂಹಲ ಕೆರಳಿಸಿದೆ.  
ಎರಡು ಬಾರಿಯ ಚಾಂಪಿಯನ್ ಉರುಗ್ವೆ ಹಾಗೂ ಒಂದು ಬಾರಿ ಪ್ರಶಸ್ತಿ ಗೆದ್ದ ಇಂಗ್ಲೆಂಡ್ ತಂಡಗಳು ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಸೋಲನುಭವಿಸಿದ್ದರಿಂದ ಈ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿವೆ. ಇಟಲಿ ವಿರುದ್ಧ ಇಂಗ್ಲೆಂಡ್ 1-2 ಗೋಲುಗಳಿಂದ ಸೋತರೆ, ಕೋಸ್ಟ ರಿಕಾ ಎದುರು ಉರುಗ್ವೆ ಆಟಗಾರರು 1-3 ಗೋಲುಗಳಿಂದ ತಲೆಬಾಗಿಸಿದ್ದರು. ಉಭಯ ತಂಡಗಳು ಒಟ್ಟಾರೆ 10 ಬಾರಿ ಸೆಣಸಿದ್ದು, ಇಂಗ್ಲೆಂಡ್‌ಗಿಂತಲೂ ಉರುಗ್ವೆ ಒಂದು ಹೆಚ್ಚಿನ ಪಂದ್ಯ ಜಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.